Revenue Facts

ನೂತನ ಸಂಸತ್‌ ಸಿಬ್ಬಂದಿಗೆ ಡ್ರೆಸ್‌ ಕೋಡ್

ನೂತನ ಸಂಸತ್‌ ಸಿಬ್ಬಂದಿಗೆ ಡ್ರೆಸ್‌ ಕೋಡ್

ನವದೆಹಲಿ, ಸೆ 12;ಸೆ.18ರಿಂದ  ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗಳಿಗೆ ಹೊಸ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಜಾರಿಯಾಗಿದೆ. ನೂತನ ಸಂಸತ್ ಸಿಬ್ಬಂದಿಗೆ ಡ್ರೆಸ್ ಕೋಡ್ ಸೆ.18-22ರವರೆಗೆ ಸಂಸತ್‌ನ ವಿಶೇಷ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಯ ಸಮವಸ್ತ್ರ ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಗಾಢ ಗುಲಾಬಿ ಬಣ್ಣದ ನೆಹರು ಜಾಕೆಟ್ & ಖಾಕಿ ಬಣ್ಣದ ಪ್ಯಾಂಟ್ ಧರಿಸಿ ಹೊಸ ಸಂಸತ್‌ನಲ್ಲಿ ಸಿಬ್ಬಂದಿ ಕಾಣಿಸಲಿದ್ದಾರೆ. ಸಿಬ್ಬಂದಿಗಳಿಗೆ ಕುರ್ತಾ, ಪೈಜಾಮಾ, ಮಹಿಳಾ ಉದ್ಯೋಗಿಗಳಿಗೆ ಹೊಸ ವಿನ್ಯಾಸದ ಸೀರೆ, ಭದ್ರತಾ ಸಿಬ್ಬಂದಿಗಳಿಗೆ ಹೊಸ ಸಮವಸ್ತ್ರ, ಮಾರ್ಷಲ್ ಗಳು ಕುರ್ತಾ, ಪೈಜಾಮಾ, ಮಣಿಪುರಿ ಪೇಟ ಧರಿಸಲಿದ್ದಾರೆ.ಅಧಿಕಾರಿಗಳು ಬಂಧಗಾಲ ಬದಲಿಗೆ ಪಿಂಕ್ ನೆಹರು ಜಾಕೆಟ್ ಧರಿಸಲಿದ್ದಾರೆ. ಕಮಲದ ಹೂ ಇರುವ ಪಿಂಕ್ ಶರ್ಟ್ ಮತ್ತು ಖಾಕಿ ಪ್ಯಾಂಟ್, ಸಫಾರಿ ಸೂಟ್ ಬದಲಿಗೆ ಮರೆ ಮಾಚುವ ಡ್ರೆಸ್ ಕೋಡ್ ಧರಿಸಲಿದ್ದಾರೆ.ಸೆ.19ಕ್ಕೆ ಗಣೇಶ ಚತುರ್ಥಿ ಹಬ್ಬದಂದು ಪೂಜೆ ನಂತರ ಹೊಸ ಸಂಸತ್ ಭವನಕ್ಕೆ ಔಪಚಾರಿಕ ಪ್ರವೇಶ ನಡೆಯಲಿದೆ.ಸಂಸತ್ ಭವನದ ಭದ್ರತಾ ಸಿಬ್ಬಂದಿಯ ಉಡುಗೆಯೂ ಬದಲಾಗಲಿದ್ದು, ಸಫಾರಿ ಸೂಟ್‌ಗಳ ಬದಲಿಗೆ, ಅವರಿಗೆ ಮಿಲಿಟರಿ ಉಡುಪು ಹೋಲುವ ಬಟ್ಟೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.

Exit mobile version