Revenue Facts

ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಖರೀದಿ ಮತ್ತು ಮಾರಾಟದ ವೇಳೆ ಅಗತ್ಯವಿರುವ ದಾಖಲೆಗಳ ಪಟ್ಟಿ

ನೀವು ಯಾವುದೇ ಭೂಮಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಮುಂದಾಗಿದ್ದಲ್ಲಿ, ಆ ಭೂಮಿಗೆ ಸಂಬಂಧಿಸಿದಂತೆ ಅನೇಕ ದಾಖಲೆಗಳುನ್ನು ಪರಿಶೀಲನೆ ಹಾಗೂ ಸಂಗ್ರಹಿಸಿಟ್ಟುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಇಲ್ಲವಾದರೆ ನಮಗೆ ಗೊತ್ತಿಲ್ಲದ ನಮಗೆ ಉಂಡೆ ನಾಮ ಹಾಕಿ ಪರಾರಿಯಾಗುವ ಹಾಗೂ ನಮಗೆ ಮೋಸ ಮಾಡಿ ಎಸ್ಕೇಪ್ ಆಗುವ ಮಂದಿ ನಮ್ಮ ಸುತ್ತಲೂ ಸದಾ ಇರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇನೆ ಇರ್ಲಿ ಭೂಮಿ ಮಾರಾಟ ಮಾಡುವವರಿಗೂ ಹಾಗೂ ಕೊಳ್ಳುವವರು ಮೋಸ ಹೋಗದೆ ಇರ್ಲಿ ಅನ್ನೋ ದೃಷ್ಟಿಯಿಂದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ,ನಾವು ಪರಿಶೀಲನೆ ಹಾಗೂ ಕಾಪಡಿಕೊಳ್ಳಬೇಕಾದ ದಾಖಲೆಗಳ ಯಾವು ಎಂದು ಮೊದಲು ತಿಳಿದುಕೊಳ್ಳಬಾಕಗುತ್ತದೆ.

ಇನ್ನು ಭೂಮಿ ಖರೀಧಿ ಅದರಲ್ಲೂ ಮುಖ್ಯವಾಗಿ ಕೃಷಿ ಭೂಮಿ ಖರೀದಿಸಲು ಬೇಕಾಗಿರುವ ಪ್ರಮುಖ ದಾಖಲುಗಳ ಪಟ್ಟಿ ನೋಡುವುದಾದರೆ.

ಮೊದಲನೇಯಾದಗಿ ಕರ್ನಾಟಕದಲ್ಲಿ‌ ಭೂಮಿ ಅಥವಾ ಕೃಷಿ ಭೂಮಿ ನೋಂದಣಿಗೆ ಅಗತ್ಯವಿರುವ ದಾಖಲೆಗಳು ಯಾವುವು.?

* ಸ್ಟ್ಯಾಂಪ್ ಡ್ಯೂಟಿ ಪಾವತಿಸಿರುವ ರಸೀದಿ
* ಭೂಮಿಯ ಹಕ್ಕು ಪತ್ರ
* ಮಾರಾಟ ಒಪ್ಪಂದದ‌ ಪತ್ರ
* ಆಸ್ತಿ ನೋಂದಣಿ ದಾಖಲೆಗಳು
* ಮೂಲ ಶೀರ್ಷಿಕೆ ಪತ್ರ
* ತೆರಿಗೆ ಪಾವತಿ ಮಾಡಿರುವ ರಶೀದಿಗಳು
* ಜಮೀನು ನೋಂದಣಿ ವೇಳೆ ಬೇಕಾಗಿರುವ ಸಾಕ್ಷಿಗಳು
* ಮಾರಾಟ ಪತ್ರ
* ಎನ್ಕಂಬರೆನ್ಸ್ ಸರ್ಟಿಫಿಕೇಟ್/ಪಟ್ಟಾ ಪುಸ್ತಕ(ಇಸಿ) ನಮೂನೆ 15, ನಮೂನೆ 16
* ತಾಲೂಕು ದಂಡಾಧಿಕಾರಿಗಳು ಅಥಾವ ತಹಸೀಲ್ದಾರ್‌ರಿಂದ ಎನ್‌ಒಸಿ ಪಡೆಯಬೇಕು
* ಮ್ಯುಟೇಶನ್ ರಿಜಿಸ್ಟರ್ ಸಾರ
* ಹಕ್ಕುಗಳ ದಾಖಲೆ, ಸಮೀಕ್ಷೆ ದಾಖಲೆಗಳು
* ಅಕಾರಬಂದ್
* ಹಿಸ್ಸ್ ಟಿಪ್ಪಾಣಿ ​​ಮತ್ತು ಹಿಸ್ಸಾ ಸರ್ವೆ ಸ್ಕೆಚ್
* ಭೂ ಮಾಲೀಕರ ವಂಶ ವೃಕ್ಷ
* ಭೂ ಪ್ರದಶ ಇರುವ ಗ್ರಾಮದ ನಕ್ಷೆ
* ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿಯಂತಹ ಯಾವುದೇ ಐಡಿ ಪುರಾವೆಗಳು
* ಅಗತ್ಯವಿದ್ದಲ್ಲಿ ಜನನ ಹಾಗೂ ಮರಣ ಪ್ರಮಾಣಪತ್ರಗಳು

ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಖರೀದಿಸುವ ಮೊದಲು ಪರಿಶೀಲಿಸಬೇಕಾದ ದಾಖಲೆಗಳು

* ಎನ್ಕಂಬರೆನ್ಸ್ ಪ್ರಮಾಣಪತ್ರ(ಇಸಿ)
*ಎಲ್ಲಾ ಪಕ್ಷಗಳ ಸಹಿಯನ್ನು ಹೊಂದಿರುವ ಮೂಲ ದಾಖಲೆ
* ಚಲನ್/ಡಿಡಿ ಸಂಪೂರ್ಣ ಮುದ್ರಾಂಕ ಶುಲ್ಕ *ಪಾವತಿ, ವರ್ಗಾವಣೆ ಸುಂಕದ ಪುರಾವೆ
*ನೋಂದಣಿ ಶುಲ್ಕ ಮತ್ತು ಬಳಕೆದಾರ ಶುಲ್ಕಗಳು
* ಆಸ್ತಿ ಕಾರ್ಡ್
*ಮಾರಾಟಗಾರ ಮತ್ತು ಖರೀದಿದಾರರ ಗುರುತಿನ ಪುರಾವೆ ಮತ್ತು ಸಾಕ್ಷಿ
*ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್
* ಪವರ್ ಆಫ್ ಅಟಾರ್ನಿ
* ತೆರಿಗೆ ರಶೀದಿಗಳು
* ಪವರ್ ಆಫ್ ಅಟಾರ್ನಿ ಪ್ರತಿ (ಒಂದು ವೇಳೆ ಮಾರಾಟಗಾರನು ಭೂಮಿಯನ್ನು ಮಾರಾಟ ಮಾಡಲು POAಅನ್ನು ಬಳಸುತ್ತಿದ್ದರೆ)
* ರಿಜಿಸ್ಟ್ರಾರ್ ಮುಂದೆ ಪ್ರದರ್ಶಿಸಲು ಮೂಲ ಐಡಿ ಪುರಾವೆ ಮತ್ತು ವಿಳಾಸ ಪುರಾವೆ

ಯಾವುದೇ ಭೂಮಿ ಮಾರಾಟ ಹಾಗೂ ಖರೀದಿ ಮತ್ತು ನೊಂದಣಿಗಳೆ ಮೇಲಿನ ಪಟ್ಟಿಯಲ್ಲಿ ದಾಖಲೆಗಳು ಬಹುತೇಕ ಅತ್ಯಂತ ಪ್ರಮುಖವಾದವುಗಳಾಗಿವೆ. ಇನ್ನು ಜನರು ಇತರೆ ಜನರಿಂದ ಭೂ ವ್ಯವಹಾರಗಳಿಗೆ ಸಂಬಂಧ ಪಟ್ಟಂತೆ ಹಣ ಹೂಡಿಕೆ ಮಾಡಿ ಅಥವಾ ಭೂಮಿ ಮಾರಾಟ ನೊಂದಣಿ ಮಾಡಿಸುವ ವೇಳೆ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳು ಸೂಕ್ತ ಕಾನೂನು ಸಲಹೆ, ಪರಿಚಿತ ತಜ್ಞನರು ಅಥವಾ ಉನ್ನತಮಟ್ಟದ ಸರ್ಕಾರಿ ಅಧಿಕಾರಿಗಳ ಸಲಹೆ, ಮಾರ್ಗದರ್ಶನ ಹಾಗೂ ಸರ್ಕಾರಿ ಪೋರ್ಟಗಳಲ್ಲಿನ‌ ಅಧಿಕೃತ ಮಾಹಿತಿ ತಿಳಿದುಕೊಳ್ಳುವುದು ಉತ್ತಮವಾಗಿರುತ್ತದೆ, ಆಗ ಮಾತ್ರ ಸಾಕಷ್ಟು ವಂಚನೆ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ..

Exit mobile version