Revenue Facts

ನೋಂದಣಿಯು ಕಡ್ಡಾಯವಾಗಿರುವಂಥ ದಸ್ತಾವೇಜುಗಳು ಯಾವುವು ಗೊತ್ತಾ?

ಬೆಂಗಳೂರು ಜುಲೈ 11: ನೋಂದಣಿಯು ಕಡ್ಡಾಯವಾಗಿರುವಂಥ ದಸ್ತಾವೇಜುಗಳು ಈ ಕೆಳಕಂಡಂತಿವೆ :-
(I)ಕೆಳಕಂಡ ದಸ್ತಾವೇಜುಗಳನ್ನು, ಅವು ಸಂಬಂಧಪಡುವಂಥ ಸ್ವತ್ತು, 1864ರ ಅಧಿನಿಯಮ ಸಂಖ್ಯೆ XVI ಅಥವಾ ಭಾರತದ ನೋಂದಣಿ ಅಧಿನಿಯಮ, 1866 (1866ರ ಅಧಿನಿಯಮ ಸಂಖ್ಯೆ 20) ಅಥವಾ ಭಾರತದ ನೋಂದಣಿ ಅಧಿನಿಯಮ, 1871 (1871ರ ಅಧಿನಿಯಮ ಸಂಖ್ಯೆ 8) ಅಥವಾ ಭಾರತದ ನೋಂದಣಿ ಅಧಿನಿಯಮ, 1877 (1877ರ ಅಧಿನಿಯಮ ಸಂಖ್ಯೆ 3) ಅಥವಾ ಈ ಅಧಿನಿಯಮವು ಜಾರಿಗೆ ಬಂದ ಅಥವಾ ಜಾರಿಗೆ ಬರುವಂಥ ಜಿಲ್ಲೆಯಲ್ಲಿ ಇದ್ದರೆ ಮತ್ತು ಅವುಗಳನ್ನು ಈ ಅಧಿನಿಯಮಗಳು ಜಾರಿಗೆ
ಬಂದಂಥ ದಿನಾಂಕದಂದು ಅಥವಾ ಆ ತರುವಾಯ ಬರೆದುಕೊಟ್ಟಿದ್ದರೆ ನೋಂದಣಿ ಮಾಡತಕ್ಕದ್ದು, ಎಂದರೆ.

(ಎ) ಸ್ಥಿರಸ್ವತ್ತಿನ ದಾನಪತ್ರಗಳು;

(ಬಿ)ಸ್ಥಿರಸ್ವತ್ತಿನ ಅಥವಾ ಅದರಲ್ಲಿ ಒಂದು ನೂರು ರೂಪಾಯಿಗಳ ಮತ್ತು ಅದಕ್ಕೂ ಮೇಲ್ಪಟ್ಟ ಮೌಲ್ಯದ ಯಾವುದೇ ಹಕ್ಕು, ಸ್ವಾಮ್ಯ ಅಥವಾ ಹಿತಾಸಕ್ತಿಯನ್ನು ಅದು ಅಥವಾ ಅವಲಂಬಿತವಾಗಿರಲಿ, ನಿಹಿತವಾಗಿರಲಿ ಈಗಾಗಲಿ ಅಥವಾ ಮುಂದೆಯಾಗಲಿ ಸೃಜಿಸಲು, ಘೋಷಿಸಲು, ಹಸ್ತಾಂತರಿಸಲು, ಪರಿಮಿತಿಗೊಳಿಸಲು ಅಥವಾ ಅಂತ್ಯಗೊಳಿಸುವಂತೆ ತಾತ್ಪರ್ಯವಾಗುವಂಥ ಅಥವಾ ಪ್ರವರ್ತಿಸುವಂಥ ಇತರ ಮರಣ ಶಾಸನೇತರ ಪತ್ರಗಳು;

(ಸಿ) ಯಾವುದೇ ಅಂಥ ಹಕ್ಕು, ಸ್ವಾಮ್ಯ ಅಥವಾ ಹಿತಾಸಕ್ತಿಯನ್ನು ಸೃಜಿಸುವ, ಘೋಷಿಸುವ, ಹಸ್ತಾಂತರಿಸುವ, ಅಂತ್ಯಗೊಳಿಸುವುದರ ಕಾರಣದಿಂದಾಗಿ ಯಾವುದೇ ಪ್ರತಿಫಲದ ಸ್ವೀಕಾರ ಅಥವಾ ಸಂದಾಯವನ್ನು ಒಪ್ಪುವಂಥ ಮರಣಶಾಸನೇತರ ಪತ್ರಗಳು; ಮತ್ತು

(ಡಿ)ವರ್ಷದಿಂದ ವರ್ಷಕ್ಕೆ ಅಥವಾ ಒಂದು ವರ್ಷವನ್ನು ಮೀರುವ ಯಾವುದೇ ಅವಧಿಗಾಗಿ ಅಥವಾ ವಾರ್ಷಿಕ ಬಾಡಿಗೆಯನ್ನು ಮೀಸಲಿಡುವ ಸ್ಥಿರಸ್ವತ್ತಿನ ಗೇಣಿಗಳು;

[(2) ಸ್ಥಿರಸ್ವತ್ತಿಗೆ ಅಥವಾ ಅದರಲ್ಲಿ ಒಂದು ನೂರು ರೂಪಾಯಿಗಳ ಮತ್ತು ಅದಕ್ಕೂ ಮೇಲ್ಪಟ್ಟ ಮೌಲ್ಯದ ಯಾವುದೇ ಹಕ್ಕು, ಸ್ವಾಮ್ಯ ಅಥವಾ ಹಿತಾಸಕ್ತಿಯನ್ನು ಅದು ಅಥವಾ ಅವಲಂಬಿತವಾಗಿರಲಿ,
ನಿಹಿತವಾಗಿರಲಿ ಈಗಾಗಲಿ ಅಥವಾ ಮುಂದೆಯಾಗಲಿ ಸೃಜಿಸಲು, ಘೋಷಿಸಲು, ಹಸ್ತಾಂತರಿಸಲು, ಪರಿಮಿತಿಗೊಳಿಸಲು ಅಥವಾ ಅಂತ್ಯಗೊಳಿಸುವಂತೆ ತಾತ್ಪರ್ಯವಾಗುವ ಅಥವಾ ಪ್ರವರ್ತಿಸುವಂಥ ನ್ಯಾಯಾಲಯದ ಯಾವುದೇ ಡಿಕ್ರಿ ಅಥವಾ ಆದೇಶ ಅಥವಾ ಯಾವುದೇ ತೀರ್ಪನ್ನು ವರ್ಗಾಯಿಸುವ, ಹಸ್ತಾಂತರಿಸುವ ಮರಣಶಾಸನೇತರ ಪತ್ರಗಳು:

(ii) ಜಾಯಿಂಟ್ ಸ್ಪಾಕ್ ಕಂಪನಿಯ ಆಸ್ತಿಗಳು ಪೂರ್ಣವಾಗಿ ಅಥವಾ ಭಾಗಶಃ ಸ್ಥಿರಸ್ವತ್ತು ಆಗಿದ್ದಾಗ್ಯೂ ಸಹ, ಅಂಥ ಕಂಪನಿಯ ಷೇರುಗಳಿಗೆ ಸಂಬಂಧಪಟ್ಟ ಯಾವುದೇ ಪತ್ರ ಅಥವಾ
(iii) ಅಂಥ ಯಾವುದೇ ಕಂಪನಿಯು ಹೊರಡಿಸಿದ ಮತ್ತು ಅಂಥ ಡಿಬೆಂಚರುಗಳ ಧಾರಕರ ಪ್ರಯೋಜನಕ್ಕಾಗಿ ನ್ಯಾಸರಿಗಳಿಗೆ ನ್ಯಾಸದ ಮೇಲೆ, ಕಂಪನಿಯು ತನ್ನ ಪೂರ್ಣ ಅಥವಾ ಭಾಗಶಃ ಸ್ಥಿರಸ್ವತ್ತನ್ನು ಅಥವಾ ಹಿತಾಸಕ್ತಿಯನ್ನು ಅಡಮಾನ ಮಾಡಿರುವ, ಹಸ್ತಾಂತರಿಸಿರುವ ಅಥವಾ ಅದರಲ್ಲಿನ ಯಾವುದೇ ವರ್ಗಾಯಿಸಿರುವ ನೋಂದಾಯಿತ ಪತ್ರದ ಮೂಲ.

Exit mobile version