Revenue Facts

ಈ ಬಾರಿ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಗೊತ್ತಾ…!

ಈ ಬಾರಿ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಗೊತ್ತಾ…!

ಚಾಮರಾಜನಗರ: ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಮರಾಜನಗರದ ಹನೂರು ತಾಲ್ಲುಕಿನ ಶ್ರೀ ಮಲೆಮಹದೇಶ್ವರ ಬೆಟ್ಟ ಸಹ ಒಂದು. ಮಲೆಮಹದೇಶ್ವರ ಹುಂಡಿ ಹಣ ಎಣಿಕೆ ನಡೆದಿದೆ. ರಾಜ್ಯ ಸರ್ಕಾರದ ಯೋಜನೆಯಲ್ಲಿ ಪ್ರಮುಕ ಯೋಜನೆಯಲ್ಲೊಂದಾದ ಶಕ್ತಿ ಯೋಜನೆಯಡಿ ಮಹಿಳೆಯರು ದೇವಾಲಕ್ಕೆ ಭೇಟಿ ನಿಡುವುದು ಹೆಚ್ಚಾಗಿದೆ. ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಂದತೆ ಹುಂಡಿಯೂ ಸಹ ತುಂಬಿದೆ . ೨೩ ದಿನಗಳಲ್ಲಿ ೨ ಕೋಟಿ ರೂ ಹಣ ಸಂಗ್ರಹವಾಗಿದೆ. ನವೆಂಬರ ತಿಂಗಳಲ್ಲಿ ಹಮವಾಸೆ, ಹುಣ್ಣಿಮೆ, ಕಾರ್ತಿಕ ಸೋಮವಾರ, ದೀಪಾವಳಿ ಸರ್ಕಾರಿ ರಜೆ, ಜಾತ್ರೆಯ ಅಂಗವಾಗಿ ಹೆಚ್ಚು ಭಕ್ತರು ವಲೆ ಮಹದೇಶ್ವರ ಬೆಟ್ಟಕ್ಕೆ ಭೇಡಿ ನೀಡಿದ್ದಾರೆ . ಭಕ್ತಾದಿಗಳು ಹರಕೆಯ ರೂಪದಲ್ಲಿ ಬೆಳ್ಳಿ, ಚಿನ್ನ, ಹಣವನ್ನು ಹುಂಡಿಗೆ ಹಾಕಿದ್ದಾರೆ. ಹುಂಡಿ ಎಣಿಕೆಯ ಸಮಯದಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಿಸಿಟಿವಿ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು. ಒಟ್ಟು ೨,೦೦,೪೧೭೨೪ ರೂ ಸಂಗ್ರಹವಾಗಿದೆ. ಈ ಬಾರಿ ಬೆಳ್ಳಿ ೧.ಕೆಜಿ ೫೧೪ ಗ್ರಾಂ , ೭೬ ಗ್ರಾಂ ಚಿನ್ನ ಸಂಗ್ರಹವಾಗಿದೆ. ಒಟ್ಟಾರೆ ಹೇಳುವುದಾರೆ ನಮ್ಮಲ್ಲಿ ದೇವರನ್ನು ನಂಬುವವರ ಸಂಖ್ಯೆ ಹಚ್ಚಾಗಿದೆ. ಕಳೆದ ನವೆಂಬರನಲ್ಲಿ ೨೮ ದಿನಕ್ಕೆ ೨.೧೦ ಕೋಟಿ ಸಂಗ್ರಹವಾಗಿತ್ತು. ೨ ಸಾವಿರದ ನೋಟು ಚಲಾವಣೆಯಲ್ಲಿ ಇಲ್ಲದಿದ್ದರು ಭಕ್ತಾದಿಗಳು ೨ ಸಾವಿರ ನೋಟುಗಳನ್ನೂ ಸಹ ಹಾಕಿದ್ದಾರೆ.

Exit mobile version