ಬೆಂಗಳೂರು ಏ27;ಕರ್ನಾಟಕ ಸರ್ಕಾರದ ದಿನಾಂಕ 24-05-2018ರ ನಡವಳಿ ಆದೇಶದಂತೆ ಗೌರವಧನವನ್ನು ( Honorarium ) ಪಾವತಿಸಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ, ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ಗೌರವಧನವನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.ಈಗಾಗಲೇ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳ ಗೌರವಧನವನ್ನು ನಿಗಧಿ ಪಡಿಸಲಾಗಿದೆ.ಈ ಬಗ್ಗೆ ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ವಿಧಾನಸಭಾ ಸಾರ್ವತ್ರಿಕೆ ಚುನಾವಣೆ-2023ರ ಸಂಬಂಧ ಮತಗಟ್ಟೆ ಅಧಿಕಾರಿಗಳಿಗೆ ಗೌರವಧನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ, ಮತಗಟ್ಟೆ ಅಧಿಕಾರಿಗಳು, ಮತಏಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವಧನ ಪಾವತಿಸಲು ಸೂಚಿಸಲಾಗಿದೆ. ಇದು ರಾಜ್ಯದ ಎಲ್ಲಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ, ಸಿಬ್ಬಂದಿಗಳಿಗೂ ಅನ್ವಯಿಸಲಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ, ಸಿಬ್ಬಂದಿಗಳ ಗೌರವಧನ
*ಪ್ರೆಸಿಡಿಂಗ್ ಆಫೀಸರ್ – ರೂ.500ರಂತೆ 4 ದಿನಕ್ಕೆ ರೂ.2,000
*ಎ ಆರ್ ಪಿ ಓ – ರೂ.350ರಂತೆ ನಾಲ್ಕು ದಿನಕ್ಕೆ ರೂ.1,400
*ಪೊಲಿಂಗ್ ಆಫೀಸರ್ ರೂ.350ರಂತೆ 4 ದಿನಕ್ಕೆ ರೂ.1050
*ಮೈಕ್ರೋ ವೀಕ್ಷಕರು – ರೂ.1,500
*ಪೊಲಿಂಗ್ ದಿನದ ಬಿಎಲ್‌ಓಗಳಿಗೆ ರೂ.350
*ಡಿ-ಗ್ರೂಪ್ ಸಿಬ್ಬಂದಿಗೆ ರೂ.200