Revenue Facts

ಬೆಂಗಳೂರು- ಕೋಲ್ಕತ್ತಾದಿಂದ ಅಯೋಧ್ಯೆಗೆ ನೇರ ವಿಮಾನಯಾನ ಪ್ರಾರಂಭ.

ಬೆಂಗಳೂರು- ಕೋಲ್ಕತ್ತಾದಿಂದ ಅಯೋಧ್ಯೆಗೆ ನೇರ ವಿಮಾನಯಾನ ಪ್ರಾರಂಭ.

ಡಿಸೆಂಬರ್ 29 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) 01- 17 – 2024 ರಿಂದ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ಪ್ರಾರಂಭಿಸುವುದಾಗಿ ಹೇಳಿದೆ.

ಬೆಂಗಳೂರು: ಜನವರಿ 22ರಂದು ಅಯೋಧ್ಯೆ(ayodhya) ಯಲ್ಲಿ ಶ್ರೀ ರಾಮಮಂದಿರ (Ram Mandir) ಉದ್ಘಾಟನೆಯ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಅಯೋಧ್ಯೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ನಂತರದ ದಿನಗಳಲ್ಲಿಯೂ ಅಯೋಧ್ಯೆಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನಯಾನ ಆರಂಭಿಸಲಿದೆ.

ಬೆಳಗ್ಗೆ 8.05 ಕ್ಕೆ ಹೊರಟು 10:35ಕ್ಕೆ ವಿಮಾನ ಅಯೋಧ್ಯ ತಲುಪಲಿದೆ…!

ಬೆಂಗಳೂರು -ಅಯೋಧ್ಯ ಮಾರ್ಗದ ಮೊದಲ ವಿಮಾನ ಯಾನ ಜನವರಿ 17ರಂದು ಆರಂಭವಾಗಲಿದೆ. ಅಂದು ಬೆಳಗ್ಗೆ 8.05 ಕ್ಕೆ ಹೊರಟು 10:35ಕ್ಕೆ ಅಯೋಧ್ಯ ತಲುಪಲಿದೆ. ಮತ್ತೆ ಅಯೋಧ್ಯೆಯಿಂದ ಮಧ್ಯಾಹ್ನ 3:40ಕ್ಕೆ ಹೊರಟರೆ ಸಂಜೆ 6.10ಕ್ಕೆ ಬೆಂಗಳೂರು ತಲುಪ ಬಹುದಾಗಿದೆ. airindiaexpress.com ವೆಬ್ಸೈಟ್ ಮತ್ತು ಆಪ್ ಗಳಲ್ಲಿ ವಿಮಾನಯಾನದ ವೇಳಾಪಟ್ಟಿ, ಟಿಕೆಟ್ ಬುಕಿಂಗ್ ವ್ಯವಸ್ಥೆ ಇದೆ.

ದೇಶಕ್ಕೆ ಐತಿಹಾಸಿಕ ದಿನವಾಗಲಿದೆ ಎಂದ ಚಿವ ಜ್ಯೋತಿರಾದಿತ್ಯ ಸಿಂಧಿಯಾ…!

ವಿಮಾನ ಆರಂಭವಾಗುವುದರಿಂದ ನಾಳೆ ದೇಶಕ್ಕೆ ಐತಿಹಾಸಿಕ ದಿನವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(jyotiraditya scindia) ಶುಕ್ರವಾರ ತಿಳಿಸಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣದ ಉದ್ಘಾಟನೆಯೊಂದಿಗೆ ಒಟ್ಟಾರೆ ಪ್ರದೇಶವನ್ನು ಹೆಚ್ಚಿಸುವ ಮತ್ತು ರನ್‌ವೇ ಉದ್ದವನ್ನು ಹೆಚ್ಚಿಸುವ ಮೂಲಕ ಎರಡನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲಾಗುವುದು.

Exit mobile version