Revenue Facts

ಬಿಎಂಟಿಸಿ ನಿಲ್ದಾಣಗಳಲ್ಲೂ ಡಿಸೆಂಬರ್‌ಗೆ ಡಿಜಿಟಲ್ ಬೋರ್ಡ್‌ ಕಡ್ಡಾಯ

ಬಿಎಂಟಿಸಿ ನಿಲ್ದಾಣಗಳಲ್ಲೂ ಡಿಸೆಂಬರ್‌ಗೆ ಡಿಜಿಟಲ್ ಬೋರ್ಡ್‌ ಕಡ್ಡಾಯ

ಬೆಂಗಳೂರು;ಬಸ್‌ಗಳಲ್ಲಿ ಮಾತ್ರವಲ್ಲದೆ, ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ಬಸ್‌ಗಳ ಮಾಹಿತಿ ಒದಗಿಸುವ ಸ್ವಯ೦ಚಾಲಿತ ಡಿಜಿಟಲ್(Digitalboard) ಬೋರ್ಡ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಬಿಎಂಟಿಸಿ(BMTC) ಚಾಲನೆ ನೀಡಿದ್ದು, ನಗರಾದ್ಯಂತ ಐನೂರಕ್ಕೂ ಅಧಿಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಒದಗಿಸುವ ಸ್ವಯಂಚಾಲಿತ ಡಿಜಿಟಲ್ ಬೋರ್ಡ್ ಗಳನ್ನು ಅಳವಡಿಸಲಾಗಿದೆ,ಸಾರ್ವಜನಿಕ ಸೇವೆಯಲ್ಲಿರುವ ಖಾಸಗಿ ಬಸ್, ಟ್ಯಾಕ್ಸಿ, ಗೂಡ್ಸ್,ವಾಹನಗಳಿಗೆ ಮುಂದಿನ ಡಿಸೆಂಬರ್ ಒಳಗೆ GPS ಅಳವಡಿಕೆ ಕಡ್ಡಾಯ ಮಾಡಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮಹಿಳೆಯರು, ಮಕ್ಕಳು, ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಸಾರಿಗೆ ಇಲಾಖೆ ಸರ್ಕಾರಕ್ಕೆ ಮನವರಿಗೆ ಮಾಡಿದೆ. GPS ಮೂಲಕ ವಾಹನಗಳ ಟ್ರ್ಯಾಕಿಂಗ್ ಸುಲಭವಾದರೆ, ಪ್ಯಾನಿಕ್ ಬಟನ್(panic button) ಕಡ್ಡಾಯ ಅಳವಡಿಕೆ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಿದೆ ಎಂದು ಅದು ಹೇಳಿದೆ.ಆಯ್ದ ಬಸ್‌ ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಹಾಕಲಾಗಿದೆ. ಇನ್ನೂ ಕೆಲವು ಕಡೆ ಕೆಲಸ ನಡೆಯುತ್ತಿದೆ. ಹಂತ ಹಂತವಾಗಿ ಎಲ್ಲಾ ಬಸ್ ನಿಲ್ದಾಣ ಮತ್ತು ಬಸ್ ಶೆಲ್ಟರ್‌ಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಈ ಕುರಿತು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ಮಾತನಾಡಿ, ಬಸ್ ಶೆಲ್ಟರ್‌ಗಳಲ್ಲಿ ಡಿಜಿಟಲ್‌(Digital board) ಬೋರ್ಡ್ ಅಳವಡಿಸುವ ಯೋಜನೆ ದೀರ್ಘ ಕಾಲದಿಂದ ಬಾಕಿ ಉಳಿದಿದೆ.

Exit mobile version