Revenue Facts

ಲೋಕಾಯುಕ್ತ ಧಾಳಿಗೆ ಒಳಗಾಗಿದ್ದ ದೇವನಹಳ್ಳಿ ತಹಶೀಲ್ದಾರ್ K.ಶಿವರಾಜ್ ಅಮಾನತು

ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್‌ ಅವರನ್ನು ಸೋಮವಾರ ಅಮಾನತು ಮಾಡಲಾಗಿದೆ.ತಹಶೀಲ್ದಾರ್ ಶಿವರಾಜ್, ಆದಾಯಕ್ಕಿಂತಲೂ ಶೇ 225ರಷ್ಟು ಅಧಿಕ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪ್ರಾಥಮಿಕ ತನಿಖೆಯಲ್ಲಿ ಧೃಡಪಟ್ಟಿದೆ,ಕೋಟ್ಯಾಂತರ ಆಸ್ತಿ , ಹಣ ವಾಹನ ಹೊಂದಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಅವರನ್ನು ಸರ್ಕಾರ ಅಮಾನತ್ತುಗೊಳಿಸಿದೆ.ತಹಶೀಲ್ದಾರ್ ಕೆ.ಶಿವರಾಜ್ ಕಳೆದ ತಿಂಗಳು ವರ್ಗಾವಣೆಗೊಂಡಿದ್ದರೂ ಕೆಎಟಿಯಲ್ಲಿ(KAT) ತಡೆಯಾಜ್ಞೆ ತಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.ಆಗಸ್ಟ್ 17-18 ರಂದು ಏಕಕಾಲದಲ್ಲಿ ದೇವನಹಳ್ಳಿ ತಹಶೀಲ್ದಾರ್ ಕೆ ಶಿವರಾಜ್ ಅವರ ನಿವಾಸ ಸಂಬಂದಿಕರು ಆಪ್ತರ ಮನೆಗಳ ಕಚೇರಿಗಳ ಮೇಲೆ 18 ಕಡೆ ಲೋಕಾಯುಕ್ತರ ದಾಳಿಗೆ ಒಳಗಾಗಿದ್ದರು.ತಹಶೀಲ್ದಾರ್‌ ಹುದ್ದೆಯಲ್ಲಿ ಶಿವರಾಜ್‌ ಮುಂದುವರೆದರೆ ಪ್ರಕರಣದ ತನಿಖೆಗೆ ಅಡ್ಡಿಯಾಗುವ ಮತ್ತು ಸಾಕ್ಷ್ಯಗಳ ನಾಶ ಸಾಧ್ಯತೆ ಕಾರಣ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.ಆದಾಯಕ್ಕಿಂತ ಶೇ 225 ರಷ್ಟು ಪಟ್ಟು ಆಸ್ತಿ , ಹಣ , ವಾಹನಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲು ಲೋಕಾಯುಕ್ತರು ಸೂಚನೆ ನೀಡಿದ್ದರಿಂದ ಸರ್ಕಾರದ ಕಂದಾಯ ಇಲಾಖೆಯ ಅಧಿನ ಕಾರ್ಯದರ್ಶಿ ಮುಕ್ತಾರ ಪಾಷ ಎಚ್.ಜಿ. ರವರು ಅಮಾನತ್ತು ಮಾಡಿ ಸೋಮವಾದಿಂದಲೇ ಜಾರಿಗೆ ಬರುವಂತೆ ಆದೇಶ ಹೊಡಿಸಿದ್ದಾರೆ.

Exit mobile version