Revenue Facts

ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರು ಭೇಟಿ ಕಾರ್ಯಕ್ರಮಗಳ ವಿವರ

ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರು ಭೇಟಿ ಕಾರ್ಯಕ್ರಮಗಳ ವಿವರ

ಮೈಸೂರು ಏ8 : ರಾಜ್ಯ ವಿಧಾನಸಭಾ ಚುನಾವಣೆಯನ್ನುಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿಯೂ ಬಿಜೆಪಿಯ ಸ್ಥಾನವನ್ನು ಭದ್ರಗೊಳಿಸುವ ಉದ್ದೇಶದಿಂದ ರಾಜ್ಯಕ್ಕೆ ಸರಣಿ ಭೇಟಿಯನ್ನು ನೀಡುತ್ತಲೇ ಬಂದಿದ್ದಾರೆ. ಈ ಮೂಲಕ ಮತದಾರನ ಮನಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳಷ್ಟೇ ರಾಜ್ಯಕ್ಕೆ ಆಗಮಿಸಿದ್ದರು , ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 8 ಮತ್ತು 9ರಂದು ಮೈಸೂರು‌, ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿ ಅವರು ಆಗಮಿಸುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಏಪ್ರಿಲ್ 9 ರಂದು ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್ ಸುವರ್ಣ ಮಹೋತ್ಸವ ಕಾರ್ಯಕ್ರಮ ನೆರವೇರಿಸಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿನೀಡಲಿದ್ದಾರೆ 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಘೋಷಿಸಿದ್ದು, ಯೋಜನೆಯಲ್ಲಿ ಬಂಡೀಪುರವೂ ಸೇರಿದೆ. ಇದರ ಜೊತೆಗೆ, ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳಿರುವ ಸಂರಕ್ಷಿತ ಪ್ರದೇಶವೂ ಇದಾಗಿದೆ.ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಮೈಸೂರು ನಗರದಲ್ಲಿ ಎಸ್​ಪಿಜಿ ತಂಡದಿಂದ ಭದ್ರತೆ ಪರಿಶೀಲನೆ ಮಾಡಲಾಗಿದೆ. ಮಂಡಕಳ್ಳಿ ಏರ್​ಪೋರ್ಟ್​​, ಮೋದಿ ತೆರಳುವ ಮಾರ್ಗ, ಮೈಸೂರಿನ ಕೆಎಸ್‌ಒಯುನ ಘಟಿಕೋತ್ಸವ ಭವನದಲ್ಲೂ ತಪಾಸಣೆ ಮಾಡಲಾಗಿದೆ.

ಮೋದಿ ಆಗಮನದ ಹಿನ್ನೆಲೆ ಅರಣ್ಯ ಇಲಾಖೆ ಸಾಕಷ್ಟು ತಯಾರಿ ನಡೆಸುತ್ತಿದೆ. ರಸ್ತೆ ದುರಸ್ತಿಯೂ ನಡೆಯುತ್ತಿದೆ. ಜೊತೆಗೆ ಏಪ್ರಿಲ್ 4 ರಿಂದ 9 ರ ವರೆಗೆ ಬಂಡೀಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅತಿಥಿಗೃಹ, ಕಾಟೇಜ್‌‌ಗಳ ಬುಕ್ಕಿಂಗ್​​ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 8 ಮತ್ತು 9ರಂದು ಮೈಸೂರು‌, ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿ ಅವರು ಆಗಮಿಸುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರಧಾನಿ ರಾಜ್ಯ ಪ್ರವಾಸದ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

 

*ಇಂದು ಸಂಜೆ 7:30ಕ್ಕೆ ದೆಹಲಿಯಿಂದ ಮೈಸೂರಿಗೆ ಆಗಮನ

*ಮೈಸೂರಿನ ಱಡಿಷನ್ ಬ್ಲೂ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ

*ನಾಳೆ ಬೆಳಗ್ಗೆ 6: 30 ಬಂಡೀಪುರಕ್ಕೆ ಹೆಲಿಕಾಪ್ಟರ್​​ನಲ್ಲಿ ಪ್ರಯಾಣ

*ಬೆಳಗ್ಗೆ 7ಕ್ಕೆ ಬಂಡೀಪುರಕ್ಕೆ ಆಗಮಿಸಿ ಅಭಯಾರಣ್ಯದಲ್ಲಿ ಸಫಾರಿ

*ಬೆಳಗ್ಗೆ 9:30ಕ್ಕೆ ತಮಿಳುನಾಡಿನ ನೀಲಗಿರೀಸ್‌ಗೆ ಮೋದಿ ಪ್ರಯಾಣ

*ಬೆಳಗ್ಗೆ 11ಕ್ಕೆ ಮೈಸೂರಿನ ಓವಲ್ ಮೈದಾನಕ್ಕೆ ಮೋದಿ ಆಗಮನ

*ಕೆಎಸ್ಒಯುನ ಘಟಿಕೋತ್ಸವ ಭವನದಲ್ಲಿ ನಡೆಯುವ ಸಂಭ್ರಮ

*ಅರಣ್ಯಾಧಿಕಾರಿಗಳು, ವಿದೇಶಿ ಅತಿಥಿಗಳ ಜೊತೆ ಪ್ರಧಾನಿ ಚರ್ಚೆ

*ಮಧ್ಯಾಹ್ನ 12:30ಕ್ಕೆ ಮಂಡಕಳ್ಳಿ ನಿಲ್ದಾಣದಿಂದ ದೆಹಲಿಗೆ ಪ್ರಯಾಣ

Exit mobile version