Revenue Facts

ಭಾರತದ ಅತೀ ಶ್ರೀಮಂತ ಮಹಿಳೆ ರಾಧಾ ವೆಂಬು ಬಗ್ಗೆ ನಿಮಗೆಷ್ಟು ಗೊತ್ತು..?

ಭಾರತದ ಅತೀ ಶ್ರೀಮಂತ ಮಹಿಳೆ ರಾಧಾ ವೆಂಬು ಬಗ್ಗೆ ನಿಮಗೆಷ್ಟು ಗೊತ್ತು..?

ಬೆಂಗಳೂರು, ಮಾ. 23 : 2023ರ ಎಂ3ಎಂ ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿ ಈಗಾಗಲೇ ರಿಲೀಸ್‌ ಆಗಿದ್ದು, ಇದರಲ್ಲಿ ಸಾಫ್ಟ್ವೇರ್ ಮತ್ತು ಸೇವಾ ವಲಯದಲ್ಲಿ ರಾಧಾ ವೆಂಬು ಎರಡನೇ ಅತೀ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ. ರಾಧಾ ವೆಂಬು ಅವರು ಭಾರತದಲ್ಲಿ ಕಷ್ಟಪಟ್ಟು ಸಾಫ್ಟ್ವೇರ್ ಉದ್ಯಮದಲ್ಲಿ ಶ್ರೀಮಂತೆಯಾಗಿದ್ದಾರೆ. ರಾಧಾ ವೆಂಬು ಅವರು, ಸಾಫ್ಟ್ವೇರ್ ಸಂಸ್ಥೆಯಾದ ಜೊಹೊ ಸಹ ಸಂಸ್ಥಾಪಕರಾಗಿದ್ದಾರೆ. ತಮಿಳುನಾಡು ಮೂಲದ ಸಂಸ್ಥೆಯಾಗಿದ್ದು, ಜೊಹೊದಲ್ಲಿ ರಾಧಾ ವೆಂಬು ಅವರು ಅತೀ ದೊಡ್ಡ ಸ್ಟೇಕ್ ಹೋಲ್ಡರ್ ಆಗಿದ್ದಾರೆ.

ಶೇಕಡ 47.8ರಷ್ಟು ಷೇರನ್ನು ರಾಧಾ ಅವರು ಹೊಂದಿದ್ದಾರೆ. ಈ ಸಂಸ್ಥೆಯು 2700 ಕೋಟಿ ರೂಪಾಯಿಗೂ ಅಧಿಕ ಲಾಭವನ್ನು ಪಡೆದಿದೆ. ವೆಂಬು ಕುಟುಂಬ ಜೋಹೋದಲ್ಲಿ ಶೇ. 80ರಷ್ಟು ಆದಾಯವನ್ನು ಹೊಂದಿದೆ. ರಾಧಾ ವೆಂಬು ಅವರ ನಿವ್ವಳ ಆದಾಯ 4 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಅಂದಾಜು 32,800 ಕೋಟಿ ರೂಪಾಯಿ. 200 ಜನರ ಜುಹೊ ಮೇಲ್ಸ್ ಪ್ರೊಡೆಕ್ಟ್ ಮ್ಯಾನೆಜರ್ಗಳ ತಂಡದ ಮುಖ್ಯಸ್ಥೆಯಾಗಿದ್ದಾರೆ. ಚೆನ್ನೈನಲ್ಲಿರುವ ರಾಧಾ ಅವರ ಕಚೇರಿಯೂ ಇಲ್ಲೇ ಇದೆ.

1972ರಲ್ಲಿ ರಾಧಾ ವೆಂಬು ಜನಿಸಿದರು, ರಾಧಾ ಅವರ ತಂದೆ ಮದ್ರಾಸ್ ಹೈಕೋರ್ಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ರಾಧಾ ವೆಂಬು ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐಟಿಐನಲ್ಲಿ ಪದವಿ ಪಡೆದ ರಾಧಾ ವೆಂಬು ಅವರು ಇಂಡಸ್ಟ್ರೀಯಲ್ ಮ್ಯಾನೆಜ್ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ರಾಧಾ ವೆಂಬು ಸಂಸ್ಥೆಯ ಜೊಹೊ ಮೇಲ್ ಅನ್ನು ನಿರ್ವಹಿಸುತ್ತಿದ್ದಾರೆ. ರಾಧಾ ಅವರು ಅಧ್ಯಯನವನ್ನು ಮಾಡುತ್ತಿರುವಾಗಲೇ ಉದ್ಯಮದಲ್ಲಿ ತೊಡಗಿದ್ದರು.

1996ರಲ್ಲಿ ತನ್ನ ಸಹೋದರ ಶ್ರೀಧರ್ ಹಾಗೂ ಶೇಖರ್ ವೆಂಬು ಜೊತೆ ಸೇರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಕಳೆದ ಒಂದು ವರ್ಷದಿಂದ 103 ಸ್ಥಾನಗಳನ್ನು ಪಡೆದ ರಾಧಾ ಅವರು ಸಾಫ್ಟ್ವೇರ್ ಕ್ಷೇತ್ರದಲ್ಲಿ ಎರಡನೇ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

Exit mobile version