Revenue Facts

ಮನೆಯ ಲಿವಿಂಗ್ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ..

ಮನೆಯ ಲಿವಿಂಗ್ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ..

ಬೆಂಗಳೂರು, ಏ. 01 : ಮನೆ ಯಾವಾಗಲೂ ಸುಂದರವಾಗಿ ಕಾಣಬೇಕು. ಕೆಲವರು ತಮ್ಮ ಮನೆಯನ್ನು ಎಷ್ಟೇ ನೀಟ್ ಆಗಿ ಇಡಬೇಕು ಎಂದು ಕೊಂಡರೂ ಸಾಧ್ಯವಿಲ್ಲ. ಇನ್ನು ಮನೆ ಸ್ವಚ್ಛವಾಗಿದ್ದರೂ, ಕೆಲ ವಸ್ತುಗಳು ಮನೆಯ ಅಂದವನ್ನು ಹಾಳು ಮಾಡುತ್ತಿರುತ್ತವೆ. ಅದರಲ್ಲೂ ಮನೆಯ ಲಿವಿಂಗ್ ಏರಿಯಾ ಆದಷ್ಟು ಸರಳವಾಗಿಯೂ ಸುಂದರವಾಗಿಯೂ ಕಾಣಬೇಕು. ಯಾಕೆಂದರೆ, ಮನೆಗೆ ಯಾರೇ ಅತಿಥಿಗಳು ಬಂದರು ಹೆಚ್ಚು ಕಾಲ ಸಮಯ ಕಳೆಯುವುದು ಲಿವಿಂಗ್ ಏರಿಯಾದಲ್ಲೇ. ಅದಕ್ಕಾಗಿ ಈ ಕೆಳಗಿನ ಕೆಲ ಟಿಪ್ಸ್ ಗಳನ್ನು ಫಾಲೋ ಮಾಡಿ.

ಮನೆಯ ಲಿವಿಂಗ್ ಏರಿಯಾದ ಲೈಟಿಂಗ್ ಎಲ್ಲರೂ ಒಪ್ಪುವಂತಿರಲಿ. ಎಲ್ ಇಡಿ ಬಲ್ಬ್ ಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ. ಮನೆಯ ಲೈಟ್ ಗಳು ಡಿಮ್ ಆಗಿದ್ದರೆ, ಅಂದವನ್ನು ಹಾಳು ಮಾಡುತ್ತವೆ. ಮನೆಯ ನಿರ್ಮಾಣ ಮಾಡುವಾಗಲೇ ಮನೆಗೆ ಸೂರ್ಯನ ಬೆಳಕು ಮತ್ತು ಗಾಳಿ ಬರುವಂತೆ ನೋಡಿಕೊಳ್ಳುವುದು ಇನ್ನೂ ಉತ್ತಮೆ. ಆಗ ಹಗಲಿನಲ್ಲಿ ನ್ಯಾಚುರಲ್ ಬೆಳಕೇ ಸಾಕಾಗುತ್ತದೆ. ಇಲ್ಲವಾದರೆ ಎರಡೂ ಸಮಯದಲ್ಲಿ ಲೈಟ್ ಬಳಸಬೇಕಾಗುತ್ತದೆ.

ಮನೆಯ ಲಿವಿಂಗ್ ರೂಮ್ ಹಾಗೂ ಡೈನಿಂಗ್ ರೂಮ್ ನಲ್ಲಿ ಅಂದವಾದ ಕಾರ್ಪೆಟ್ ಇದ್ದರೆ ತುಂಬಾ ಒಳ್ಳೆಯದು. ಕಾರ್ಪೆಟ್ ಅನ್ನು ಖರೀದಿಸುವಾಗ, ನಿಮ್ಮ ಮನೆಯ ನೆಲ, ಗೋಡೆ ಹಾಗೂ ಪೀಠೋಪಕರಣಗಳ ಬಣ್ಣಕ್ಕೆ ಹೊಂದಿಕೊಳ್ಳುವಂತಿರಲಿ. ಮನೆಯಲ್ಲಿರುವ ಕಾರ್ಪೆಟ್ ಅನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ. ಇಲ್ಲದಿದ್ದರೆ, ಕಾರ್ಪೆಟ್ ಮೇಲಿನ ಧೂಳು ಮತ್ತು ಕೊಳೆ ಅಂದವನ್ನು ಮತ್ತಷ್ಟು ಹಾಳು ಮಾಡುತ್ತದೆ. ಮನೆಗೆ ಸೋಫಾ ಖರಿದಿಸುವಾಗ ಯೋಚಿಸಿ ಆಯ್ಕೆ ಮಾಡಿ. ನಿಮ್ಮ ಮನೆಗೆ ಯಾವ ರೀತಿಯ ಸೋಫಾ ಸರಿ. ಮನೆಯಲ್ಲಿ ಮಕ್ಕಳು, ಸಾಕು ಪ್ರಾಣಿಗಳಿದ್ದರೆ, ಎಚ್ಚ ವಹಿಸಿ ಆಯ್ಕೆ ಮಾಡಿ.

ಮನೆಯಲ್ಲಿನ ಸೋಫಾವನ್ನು ಸರಿಯಾದ ಕ್ರಮದಲ್ಲಿ ಇರಿಸಿ. ಲಿವಿಂಗ್ ರೂಮ್ ನಲ್ಲಿ ಸೋಫಾ ಸರಿಯಾಗಿ ಜೋಡಿಸಿದರೆ, ಜಾಗ ಉಳಿತಾಯ ಕೂಡ ಮಾಡಬಹುದು. ಮನೆಯ ಗೋಡೆಗಳಿಗೆ ಬಣ್ಣ ಆರಿಸುವಾಗ ಎಚ್ಚರವಿರಲಿ. ಬಣ್ಣ ಕಣ್ಣಿಗೆ ಕುಕ್ಕುವಂತಿದ್ದರೆ, ಚೆನ್ನಾಗಿರುವುದಿಲ್ಲ. ಯಾವಾಗಲೂ ಲಿವಿಂಗ್ ರೂಮ್ ಗೆ ತಿಳಿ ಬಣ್ಣಗಳನ್ನು ಆರಿಸಿ. ಜೊತೆಗೆ ಗೋಡೆಯ ಬಣ್ಣಕ್ಕೆ ಹೊಂದುವಂತೆಯೇ ಕರ್ಟನ್ ಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಗೋಡೆಯ ಬಣ್ಣ ಹಾಗೂ ಕರ್ಟನ್ ಬಣ್ಣ ಒಂದೇ ಇದ್ದರೂ ಚೆನ್ನಾಗಿರುವುದಿಲ್ಲ.

Exit mobile version