Revenue Facts

ಟೋಲ್ ತೆರಿಗೆ ಸಂಗ್ರಹಕ್ಕೆ ಹೊಸ ತಂತ್ರಜ್ಞಾನ ಪರಿಚಸಿಲು ನಿರ್ಧಾರ: ಸಚಿವ ನಿತಿನ್ ಗಡ್ಕರಿ

ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಮುಂದಿನ ವರ್ಷ ಮಾರ್ಚ್ ವೇಳೆಗೆ ಭಾರತದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ತೆರಿಗೆ ಸಂಗ್ರಹಕ್ಕೆ ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಯೋಜನೆ ತರುವುದಾಗಿ ತಿಳಿಸಿದ್ದಾರೆ.

ಇನ್ನು ಮುಂದೆ ಟೋಲ್ ಪ್ಲಾಜಾಗಳಲ್ಲಿ GPS ಮೂಲಕ ಟೋಲ್ ಸಂಗ್ರಹ ..!

ಹೊಸ ವರ್ಷ ಅಂದರೆ ಮಾರ್ಚ್‌ 2024 ರಿಂದ ಟೋಲ್ ಪ್ಲಾಜಾಗಳಲ್ಲಿ ಜಿಪಿಎಸ್ ಮೂಲಕ ಟೋಲ್ ತೆರಿಗೆ ಸಂಗ್ರಹಿಸಲಾಗುತ್ತದೆ. ನೀವ್ ಕೇಳ್ತಿರೋದು ನಿಜ ಮುಂದಿನ ವರ್ಷ ಜಾರಿಯಾಗುತ್ತಿರುವ ಹೊಸ ವ್ಯವಸ್ಥೆಯು ಹೆದ್ದಾರಿಯಲ್ಲಿ ಪ್ರಯಾಣಿಸುವ ನಿಖರವಾದ ದೂರವನ್ನು ಆಧರಿಸಿ ಟೋಲ್ ತೆರಿಗೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಜಿಪಿಎಸ್ ಆಧಾರಿತ ಟೋಲ್ ತೆರಿಗೆ ಸಂಗ್ರಹಣೆಯ ಅನುಷ್ಠಾನವು ಮಾರ್ಚ್ 2024 ರಲ್ಲಿ ಪ್ರಾರಂಭವಾಗಲಿದೆ.

 

ವಾಹನಗಳು ನಿಲ್ಲುವ ಅಗತ್ಯವಿಲ್ಲದೇ ಟೋಲ್ ಸಂಗ್ರಹಕ್ಕೆ ಅನುವು…!

ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಾಗ್ನಿಷನ್ ಸಿಸ್ಟಮ್‌ಗಾಗಿ ಸಚಿವಾಲಯವು ಈಗಾಗಲೇ ಎರಡು ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಿದೆ, ಇದು ವಾಹನಗಳು ನಿಲ್ಲುವ ಅಗತ್ಯವಿಲ್ಲದೇ ಟೋಲ್ ಸಂಗ್ರಹಕ್ಕೆ ಅನುವು ಮಾಡಿಕೊಡುತ್ತದೆ. 2020-21 ಮತ್ತು 2021-22 ರಲ್ಲಿ ಫಾಸ್ಟ್‌ಟ್ಯಾಗ್ ಅನುಷ್ಠಾನಗೊಂಡ ನಂತರ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರಾಸರಿ ಕಾಯುವ ಸಮಯವು 8 ನಿಮಿಷಗಳಿಂದ ಕೇವಲ 47 ಸೆಕೆಂಡುಗಳಿಗೆ ಕಡಿಮೆಯಾಗಿದೆ.

1.5 ರಿಂದ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಸಚಿವಾಲಯ ಚಿಂತನೆ ..!

ಟೋಲ್ ಸಂಗ್ರಹದ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು, ದೇಶದಲ್ಲಿ 13.45 ಕೋಟಿಗೂ ಹೆಚ್ಚು ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ನೀಡಲಾಗಿದೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗೆ ಮುನ್ನ 1,000 ಕಿಲೋಮೀಟರ್‌ಗಿಂತ ಕಡಿಮೆ ಉದ್ದದ 1.5 ರಿಂದ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಟೆಂಡರ್ ಗಳನ್ನು ಆಹ್ವಾನಿಸಲು ಸಚಿವಾಲಯ ಚಿಂತಿಸಿದೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು

Exit mobile version