Revenue Facts

ʻವಿದ್ಯಾನಿಧಿ ವಿದ್ಯಾರ್ಥಿವೇತನʼ ಪ್ರಮಾಣ ಪತ್ರ ಸಲ್ಲಿಕೆಗೆ ಫೆ.29ರಂದು ಗಡುವು

ʻವಿದ್ಯಾನಿಧಿ ವಿದ್ಯಾರ್ಥಿವೇತನʼ ಪ್ರಮಾಣ ಪತ್ರ ಸಲ್ಲಿಕೆಗೆ ಫೆ.29ರಂದು ಗಡುವು

#Deadline # submission#Scholarship #certificate # 29th Feb

ಬೆಂಗಳೂರು;2023-24ನೇ ಸಾಲಿನಲ್ಲಿ ಸಿಎಂ ರೈತ ವಿದ್ಯಾನಿಧಿ(Vidyanidhi) ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ(Scolorship) ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಜಾತಿ & ಆದಾಯ ಪ್ರಮಾಣ ಪತ್ರವನ್ನು ಫೆ.29ರೊಳಗೆ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ. ಪೋಷಕರ ಆದಾಯ ವಾರ್ಷಿಕ ₹2.50 ಲಕ್ಷ ಮೀರಿರಬಾರದು. ಈ ವರ್ಗದ ರೈತರ ಮಕ್ಕಳು ತಮ್ಮ ಪೋಷಕರ ಜಾತಿ & ಆದಾಯ ಪ್ರಮಾಣ ಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP) ಮೂಲಕಫೆ.29ರೊಳಗೆ ಸಲ್ಲಿಸಬೇಕೆಂದು ಹೇಳಿದೆ.ಈ ವಿದ್ಯಾರ್ಥಿವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಗಳು ಅವರ ಪೋಷಕರ ಆದಾಯವು ಸಾಮಾನ್ಯ ವರ್ಗದವರಿಗೆ 2.50 ಲಕ್ಷ ರೂಪಾಯಿ ಮೀರಬಾರದು ಎಂಬುದಾಗಿ ಷರತ್ತು ವಿಧಿಸಿದೆ.ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತ ಮುಖ್ಯ ಉದ್ದೇಶವನ್ನು ರೈತ ವಿದ್ಯಾನಿಧಿ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಯೋಜನೆಯಡಿ 2500 ರೂ ಮತ್ತು ಗರಿಷ್ಠ 110000 ರೂ ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದೆ.

Exit mobile version