ಬೆಳಗಾವಿ;ಶಿಕ್ಷಣ ಸಂಸ್ಥೆ ಪರವಾನಿಗಿ ನವೀಕರಣ ಮಾಡಲು ಲಂಚ(Bribe)ಲೇ ಡಿಡಿಪಿಐ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.ಪರವಾನಗಿ ನವೀಕರಣ ಮಾಡಿಕೊಡಲು 40 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿ ಡಿಡಿಪಿಐ ಬಸವರಾಜ್ ನಾಲತವಾಡ ಎಂಬುವವರು (Lokayukta)ಬಲೆಗೆ ಬಿದ್ದಿದ್ದಾರೆ.ಡಿಡಿಪಿಐ ಬಸವರಾಜ್ ನಾಲತವಾಡ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದಲ್ಲಿರುವ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅನುಮತಿ(Licence) ನವೀಕರಣ ಮಾಡಿಕೊಡಲು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ಡಿಡಿಪಿಐ ಬಸವರಾಜ್ ನಾಲತವಾಡ ವಿರುದ್ಧ ಬಸವೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಅರ್ಜುನ ಕುರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಬಸವರಾಜ್ ನಾಲತವಾಡ 40,000 ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಸವರಾಜ್ ಅವರನ್ನು ಹಣದ ಸಹಿತ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ