Revenue Facts

Lokayukta Raid:ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಡಿಡಿಪಿಐ, ಕೇಸ್ ವರ್ಕರ್

ಹಾವೇರಿ: ಪಿಂಚಣಿ ಸೌಲಭ್ಯ ಪಡೆಯಲು ನಿವೃತ್ತ ಶಿಕ್ಷಕನಿಂದ 7 ಸಾವಿರ ರು ಲಂಚದ ಬೇಡಿಕೆಯಿಟ್ಟಿದ್ದ ಹಾವೇರಿ ಡಿಡಿಪಿಐ ಹಾಗೂ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.ಡಿಡಿಪಿಐ ಅಂದಾನಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ರೆಡ್‍ಹ್ಯಾಂಡ್‍ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಸರ್ಕಾರಿ ಉರ್ದು ಶಾಲೆಯ ನಿವೃತ್ತ ಶಿಕ್ಷಕ ಮಹಮ್ಮದ್ ಗೌಸ್ ಅವರಿಂದ 7 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆದಿದೆ.ನಿವೃತ್ತಿ ವೇತನ ಸೌಲಭ್ಯ ಪಡೆಯಲುಸಲ್ಲಿಸುವ ಪೈಲ್‌ನ್ನು ನೀಡಿ ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲು ಕೋರಿದ್ದರು.ಇದಕ್ಕಾಗಿ ಡಿಡಿಪಿಐ 7 ಸಾವಿರ ರೂ. ಲಂಚ ಕೇಳಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತಿಗೊಂಡಿರುವ ಮಹಮ್ಮದ್ ಗೌಸ್ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.ಅದೇ ರೀತಿ ಲೋಕಾಯುಕ್ತ ಪೊಲೀಸರು ಏಳು ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೆಡ್ಹಂಡಾಗಿ ದಾಳಿ ಮಾಡಿದ್ದಾರೆ.

Exit mobile version