Revenue Facts

ಮೂವರು ರೆಬೆಲ್ ಶಾಸಕರಿಗಾಗಿ ವಿಶೇಷ ಹುದ್ದೆ ಸೃಷ್ಟಿ

ಬೆಂಗಳೂರು ಡಿ 30: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಾಗ ಚಾಟಿ ಬೀಸುತ್ತಿದ್ದಂತ ರೆಬೆಲ್(Rebel) ಶಾಸಕರನ್ನು ತಣಿಸಲು, ಹಿರಿಯ ಕಾಂಗ್ರೆಸ್ ಶಾಸಕರಿಗೆ ಮಣೆ ಹಾಕೋ ಕೆಲಸವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದಾರೆ. ರೆಬೆಲ್ ಶಾಸಕರಿಗೆ ವಿಶೇಷ ಹುದ್ದೆ ಸೃಷ್ಠಿ ಮಾಡಿ, ಹಂಚಿಕೆ(assignation) ಮಾಡಿ ಆದೇಶಿಸಿದ್ದಾರೆ.ಮೂವರು ರೆಬೆಲ್ ಶಾಸಕರಿಗಾಗಿ ವಿಶೇಷ ಹುದ್ದೆ ಸೃಷ್ಟಿ ಈ ಹಿಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಹಿರಿಯ ಶಾಸಕರುಗಳಾದ ಬಸವರಾಜ್ ರಾಯರೆಡ್ಡಿ, (Basavaraj rayareddy)ಬಿ.ಆರ್ ಪಾಟೀಲ್(B.R.Patil) ಹಾಗೂ ಆರ್.ವಿ ದೇಶಪಾಂಡೆ(R.V.Deshpande) ಅವರಿಗೆ ವಿಶೇಷ ಹುದ್ದೆ ನೀಡಿ ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ.ಸಚಿವರ ನಡೆ ವಿರುದ್ಧ ರೆಬಲ್ ಆಗಿದ್ದ ಕಾಂಗ್ರೆಸ್‌ನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಶಾಸಕರಾದ ಬಸವರಾಜ್ ರಾಯರೆಡ್ಡಿಗೆ ಸಿಎಂಗೆ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದರೆ, ಬಿ.ಆ‌ರ್ ಪಾಟೀಲ್‌ಗೆ ಸಿಎಂ ಸಲಹೆಗಾರ ಹಾಗೂ ಆರ್.ವಿ ದೇಶಪಾಂಡೆ ಅವರಿಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಮೂವರಿಗೂ ಇದು ಸಂಪುಟ ದರ್ಜೆ ಸ್ಥಾನಮಾನವಾಗಿದೆ.

Exit mobile version