Revenue Facts

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಶುರುವಾಯ್ತು ದಿನಗಣನೆ;Lalbagh Flower Show 2023:

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಶುರುವಾಯ್ತು ದಿನಗಣನೆ;Lalbagh Flower Show 2023:

ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show 2023) ಸಜ್ಜಾಗಿದ್ದು, ಅನೇಕ ಬಗೆ ಬಗೆಯ ಹೂಗಳ ಮೂಲಕ ಕೆಂಪೇಗೌಡರು ಕಟ್ಟಿರುವ ಬೆಂಗಳೂರು ದರ್ಶನವಾಗಲಿದೆ. ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 213ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 20ರಿಂದ 30 ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್‌ ಶೋ ನಡೆಯಲಿದೆ.

ಫ್ಲವರ್‌ ಶೋವನ್ನು ಜನವರಿ 20ರಂದು ಬೆಳಗ್ಗೆ ‌10 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಈ ಬಾರಿಯ ಫ್ಲವರ್ ಶೋಗೆ ಎರಡರಿಂದ ಮೂರು ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. 213ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. 10 ಲಕ್ಷದಿಂದ 12 ಲಕ್ಷ ಮಂದಿ ವೀಕ್ಷಿಸುವ ಸಾಧ್ಯತೆಯಿದೆ’ ಎಂದು ತೋಟಗಾರಿಕೆ ಸಚಿವ ಎನ್‌.ಮುನಿರತ್ನ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಉದ್ಯಾನದ ಗಾಜಿನ ಮನೆ ಸಿದ್ಧವಾಗುತ್ತಿದೆ.ನಗರದ 1500 ವರ್ಷದ ಇತಿಹಾಸ, ಪ್ರಮುಖ ಘಟ್ಟಗಳು,ಲಾಲ್ ಬಾಗ್ ಬಂಡೆ,ಕಾಡುಮಲ್ಲೇಶ್ವರ ದೇವಾಲಯ,ವಿಧಾನಸೌಧದ ಕಲಾಕೃತಿಗಳು,ವರ್ಟಿಕಲ್ ಗಾರ್ಡನ್ ರೂಪದಲ್ಲಿ ಗಡಿ ಗೋಪುರ,ಹೈಕೋರ್ಟ್, ಬೆಂಗಳೂರು ಅರಮನೆ,ಬಣ್ಣ ಬಣ್ಣದ ಹೂಗಳ ನಡುವೆ ಅರಳಲಿವೆ.

ಪ್ರದರ್ಶನದಲ್ಲಿ 11 ದೇಶಗಳ ವಿವಿಧ ಬಣ್ಣದ ಹೂಗಳು

ಪ್ರದರ್ಶನದಲ್ಲಿ ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್,ಆಸ್ಟ್ರೇಲಿಯಾ,ಚಿಲಿ,ಹಾಲೆಂಡ್,ಯಥೋಪಿಯಾ ಸೇರಿದಂತೆ 11 ವಿದೇಶಗಳ 69 ಜಾತಿಯ ಹೂಗಳನ್ನು ಪ್ರದರ್ಶಿಸಲಾಗುತ್ತಿದೆ.ಇಲಾಖೆ ವತಿಯಿಂದಲೇ 6 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.

ಟಿಕೆಟ್ ದರವನ್ನು ಏರಿಕೆ ಮಾಡಿಲ್ಲ.ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ ‌75 ರೂಪಾಯಿ ನಿಗದಿ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿ 30 ರೂಪಾಯಿ ದರ ನಿಗದಿ ಮಾಡಲಾಗಿದೆ.104 ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ನಾಲ್ಕು ಗೇಟ್‌ಗಳಲ್ಲಿಲೂ ಟಿಕೆಟ್ ಕೌಂಟರ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದೆ.ಎಲ್ಲಾ ಪ್ರವೇಶ ದ್ವಾರಗಳ ಬಳಿಯೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10-12 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ.ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬೆಳಿಗ್ಗೆ 7ರಿಂದ ಸಂಜೆ 6.30ರ ತನಕ ಅವಕಾಶ ಇರುತ್ತದೆ.

Exit mobile version