Revenue Facts

ಕಾನೂನು ಮಾಪನ ಇಲಾಖೆಯ ನಿಯಂತ್ರಕಿ ಎಸ್.ಮಾಲಾ ಕಿರಣ್‌ ಲೋಕಾಯುಕ್ತ ಬಲೆಗೆ

ಕಾನೂನು ಮಾಪನ ಇಲಾಖೆಯ  ನಿಯಂತ್ರಕಿ ಎಸ್.ಮಾಲಾ ಕಿರಣ್‌ ಲೋಕಾಯುಕ್ತ ಬಲೆಗೆ

ಚಿಕ್ಕಬಳ್ಳಾಪುರ: 8,000 ರೂಪಾಯಿ ಲಂಚ ಪಡೆಯುವಾಗ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಮಾಲಾಕಿರಣ್‌ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಸವೇಶ್ವರ ಫ್ಯೂಯಲ್ ಸೆಂಟರ್‌ನಲ್ಲಿ ಪೆಟ್ರೋಲ್ ಬಂಕ್ ಮೀಟರ್ ನವೀಕರಣಕ್ಕೆ 8,000 ರೂಪಾಯಿ ಲಂಚಕ್ಕೆ ಮಾಲೀಕ ಜಯಸೂರ್ಯ ಬಳಿ ಬೇಡಿಕೆ ಇಟ್ಟಿದ್ದರು.


ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸೆರೆ ಹಿಡಿದು, ಬಂಧಿತ ಮಹಿಳೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಮಾಲಾಕಿರಣ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಮಾಲಾಕಿರಣ್‌ಗೆ ಸೇರಿದ ಬೆಂಗಳೂರಿನ ನಿವಾಸದ ಮೇಲೂ ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ.ಹಾಗೆಯೆ ಮನೆಯಲ್ಲಿ ದೊರೆಕಿದ ದಾಖಲೆಗಳ ತನಿಖೆ ನಡೆಸುತ್ತಿರುವುದಾಗಿ ಎಸ್ಪಿ ಪವನ್ ನೆಜ್ಜೂರು ಮಾಹಿತಿ ನೀಡಿದ್ದಾರೆ,

Exit mobile version