Revenue Facts

ಲೇಔಟ್ ಡೆವಲಪ್ ಮಾಡದೇ ಗ್ರಾಹಕರ ಹಣ ಪಡೆದ ಬಿಲ್ಡರ್ ಕಂಪನಿಗೆ ದಂಡ

ಬೆಂಗಳೂರು, ಜು. 19 : ಪ್ಲಾಟ್ ಖರೀದಿಸಿ 8 ವರ್ಷಗಳಾದರೂ ಮನೆ ಕಟ್ಟುವ ಕನಸು ನನಸಾಗಿಲ್ಲ. ಕಾರಣ ಕಳೆದ 8 ವರ್ಷಗಳಿಂದ ಧಾರವಾಡದ ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಕಂಪನಿ ಲೇಔಟ್ ಅಭಿವೃದ್ಧಿಗೊಳಿಸಿಲ್ಲ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗಿದೆ ಈ ಸಂಬಂಧ ಹುಬ್ಬಳ್ಳಿಯ ಮೃತ್ಯುಂಣಜಯ ಬಡಾವಣೆ ವಿದ್ಯಾನಗರ ನಿವಾಸಿ ಬಸವರಾಜ ಬಸಾಪುರ ಎಂಬುವರು ಗ್ರಾಹಕ ಆಯೋಗದ ಮೊರೆ ಹೋಗಿದ್ದು, ಪರಿಹಾರವನ್ನು ಪಡೆದುಕೊಂಡಿದ್ದಾರೆ.

ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಅಮರಗೋಳದಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾದಾಗ ಬಸವರಾಜ ಬಸಾಪುರ ಅವರು ಸೈಟ್ ಖರೀದಿಸಲು ಮುಂದಾಗಿದ್ದರು. ಈ ವೇಳೆ ಲೇಔಟ್ ನ ಪ್ಲಾಟ್ ನಂ.27 ನ್ನು 9.95 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಇದಕ್ಕಾಗಿ 5 ಲಕ್ಷ ರೂಪಾಯಿ ಮುಂಗಡ ಹಣವನ್ನು ನೀಡಿ 29 ಮೇ 2015 ರಂದು ಒಪ್ಪಂದವನ್ನೂ ಮಾಡಿಕೊಂಡಿದ್ದರು. ಬಾಕಿ ಮೊತ್ತವನ್ನು ಪ್ಲಾಟ್ ಅಭಿವೃದ್ಧಿಯಾದ ಬಳಿಕ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ, 8 ವರ್ಷವಾದರೂ ಲೇಔಟ್ ಅಭಿವೃದ್ಧಿ ಆಗಿಲ್ಲ. ಸೈಟ್, ಹಣ ಎರಡೂ ಕೈ ಸೇರಿಲ್ಲ. ಹಾಗಾಗಿ ಬಸವರಾಜ ಬಸಾಪುರ ಅವರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ನಡೆಸಿದ ಆಯೋಗ, ಬಸವರಾಜ ಬಸಾಪುರ ಅವರಿಗೆ ಹಣವನ್ನು ವಾಪಸ್ ಮಾಡಬೇಕು. ಅದೂ ಕೂಡ 5,00,000 ಹಣದ ಜೊತೆಗೆ ಶೇ.8 ರಂತೆ ಬಡ್ಡಿ ಅನ್ನು ಲೆಕ್ಕ ಹಾಕಿ ನೀಡಬೇಕು ಎಂದು ಹೇಳಿದೆ. ಜೊತೆಗೆ ದೂರುದಾರರಿಗೆ ಇದರಿಂದ ಆದ ಓಡಾಟದ ಕರ್ಚು ಸೇರಿದಂತೆ ಹಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ತಿಂಗಳ ಒಳಗೆ ನೀಡಬೇಕು ಎಂದು ತೀರ್ಪು ನೀಡಲಾಗಿದೆ.

Exit mobile version