Revenue Facts

ಹೊಸ ಕಟ್ಟಡ ನಿರ್ಮಾಣದ ಕೆಲಸ ಅರ್ಧಕ್ಕೆ ನಿಲ್ಲಲು ವಾಸ್ತು ದೋಷ ಕಾರಣವೇ..?

ಬೆಂಗಳೂರು, ಮೇ. 19 : ಕೆಲವು ಮನೆಗಳು ಬೇಗ ಸಂಪೂರ್ಣವಾಗಿ ನಿರ್ಮಾಣ ಆಗುವುದೇ ಇಲ್ಲ. ನಿಂತು ನಿಂತು ನಿರ್ಮಾಣ ಮಾಡಲಾಗುತ್ತದೆ. ಇನ್ನು ಕೆಲ ಕಟ್ಟಡಗಳು ಅರ್ಧಕ್ಕೆ ನಿರ್ಮಾಣ ಕಾರ್ಯ ನಿಂತು ಬಿಡುತ್ತವೆ. ಮತ್ತು ಕೆಲ ಕಟ್ಟಡಗಳನ್ನು ಅರ್ಧಕ್ಕೆ ನಿರ್ಮಿಸುವುದನ್ನು ನಿಲ್ಲಿಸಿ ಬೇರೆಯವರಿಗೆ ಮಾರಾಟವನ್ನು ಸಹ ಮಾಡಲಾಗುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ಜೊತೆಗೆ ಯಜಮಾನನ ಕರ್ಮ ಮತ್ತು ಋಣ ಕೂಡ ಇರುತ್ತದೆ. ಆತನಿಗೆ ಸಂಪೂರ್ಣವಾಗಿ ಮನೆಯನ್ನು ಕಟ್ಟು ಋಣ ಇರುವುದಿಲ್ಲ. ಇಲ್ಲವೇ, ಕರ್ಮದ ಫಲಗಳು ಕೂಡ ಕಾರಣವಾಗುತ್ತವೆ.

ಇನ್ನು ವಾಸ್ತು ಪ್ರಕಾರ ಕೆಲ ಕಾರಣಗಳಿಗೆ ಕಟ್ಟಡಗಳು ನಿಂತು ಹೋಗುವುದು ಹಾಗೂ ಮೇಲೇಳುವುದು ಕಷ್ಟವಾಗುತ್ತದೆ. ಈಶಾನ್ಯ ಅಥವಾ ಉತ್ತರದಲ್ಲಿ ಸ್ಟೇರ್ ಕೇಸ್ ಅನ್ನು ಹಾಕಿಕೊಂಡಿದ್ದರೆ, ಪೂರ್ವ ಹಾಗೂ ಈಶಾನ್ಯದಲ್ಲಿ ಭಾರ ಹೆಚ್ಚಾಗಿ ಕಟ್ಟಡ ನಿರ್ಮಾಣಕ್ಕೆ ತೊಂದರೆ ಆಗುತ್ತದೆ. ಉತ್ತರದಲ್ಲಿ ಮೆಟ್ಟಿಗಳನ್ನು ಅಳವಡಿಸಿದಾಗ ಅಲ್ಲಿ ಹಣದ ಕೊರತೆ ಉಂಟಾಗಿ ಮನೆ ನಿರ್ಮಾಣವಾಗುವುದನ್ನು ತಡೆಯುತ್ತದೆ. ಹಾಗೆಯೇ ವಾಯುವ್ಯದಲ್ಲಿ ಟಾಯ್ಲೆಟ್ ನಂತಹ ಬೇಡದ ಯುಟಿಲಿಟಿಗಳನ್ನು ನಿರ್ಮಾಣ ಮಾಡಿದರೆ, ಹಣದ ಕೊರತೆ ಉಂಟಾಗುತ್ತದೆ.

ಬ್ರಹ್ಮಸ್ಥಾನದಲ್ಲಿ ಮಣ್ಣನ್ನು ಹಾಕಿಕೊಳ್ಳುವುದು, ಈಶಾನ್ಯದಿಂದ ಫೌಂಡೇಶನ್ ತೋಡಿ ನೈರುತ್ಯಕ್ಕೆರ ಹೋಗಬೇಕು. ಇದರಲ್ಲಿ ತಪ್ಪನ್ನು ಮಾಡಿದರೂ ಕೂಡ ಕಟ್ಟಡ ನಿರ್ಮಾಣದಲ್ಲಿ ಸಮಸ್ಯೆಗಳು ಆಗುತ್ತಲೇ ಇರುತ್ತವೆ. ಕಟ್ಟಡದ ಭಾರವನ್ನು ವಾಸ್ತು ವಿರುದ್ಧ ಇದ್ದರೂ ಸಮಸ್ಯೆ ಆಗುತ್ತದೆ. ಸಂಪುಗಳಲ್ಲಿ ನೀರು ಸದಾ ತುಂಬಿರಬೇಕಾಗುತ್ತದೆ. ನೀರು ಖಾಲಿ ಆಗುವವರೆಗೂ ಬಿಟ್ಟರೂ ಕೂಡ ಕಟ್ಟಡ ನಿರ್ಮಾಣ ಮಾಡುವ ಮಾಲೀಕನಿಗೆ ತೊಂದರೆ ಆಗುತ್ತದೆ. ಮೂಹರ್ತಗಳಲ್ಲಿ ತಪ್ಪನ್ನು ಮಾಡಿದಾಗಲೂ ಕಟ್ಟಡ ನಿರ್ಮಾಣಕ್ಕೆ ತೊಂದರೆ ಆಗುತ್ತದೆ. ಹಾಗಾಗಿ ಇವೆಲ್ಲವನ್ನೂ ನೋಡಿಕೊಂಡು ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ.

Exit mobile version