Revenue Facts

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ; ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಯಾರಿಗೆ ಸ್ಥಾನ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ; ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಯಾರಿಗೆ ಸ್ಥಾನ

ಬೆಂಗಳೂರು, ಮೇ. 25 :;ಮುಂದೆ ಬರುವ ವರ್ಷ ಲೋಕಸಭಾ ಚುನಾವಣೆಗೆ ಈಗಲೇ ಸಿದ್ಧರಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ ಬೆನ್ನಲ್ಲೇ ಚುರುಕಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಚುನಾವಣೆಯ ಜವಾಬ್ದಾರಿ ನೀಡಲು ನಾಯಕರ ಪಟ್ಟಿ ಸಿದ್ಧಪಡಿಸಿದ್ದಾರೆ.ಕಾಂಗ್ರೆಸ್‌ ನಾಯಕರ ಪಟ್ಟಿ ಸಿದ್ಧಪಡಿಸಿ ಅದರೊಂದಿಗೆ ಎಐಸಿಸಿ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಅವರ ಜತೆ ಕುಳಿತು ಪಟ್ಟಿ ಸಿದ್ಧಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಸಿದ್ದಪಡಿಸಿದ ಕಾಂಗ್ರೆಸ್ ನಾಯಕರ ಪಟ್ಟಿಯ ವಿವರ ಹೀಗಿದೆ,

ತುಮಕೂರು – ಡಾ.ಜಿ.ಪರಮೇಶ್ವರ್ ಚಿತ್ರದುರ್ಗ – ಟಿ.ಬಿ.ಜಯಚಂದ್ರ ಶಿವಮೊಗ್ಗ – ಮಧು ಬಂಗಾರಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಚಿಕ್ಕಮಗಳೂರು – ಉಡುಪಿ – ಬಿ.ಕೆ.ಹರಿಪ್ರಸಾದ್ ಮಂಗಳೂರು – ಮಿಥುನ್ ರೈ, ಅಶೋಕ್ ರೈ ಬೆಳಗಾವಿ – ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಹುಬ್ಬಳ್ಳಿ ಧಾರವಾಡ – ಜಗದೀಶ್ ರೆಡ್ಡಿ, ಜಗದೀಶ್ ರೆಡ್ಡಿ, ಜಗದೀಶ್ ರೆಡ್ಡಿ ಮಂಜುನಾಥ್ ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್ ಉತ್ತರ ಕನ್ನಡ – ದೇಶಪಾಂಡೆ ಮೈಸೂರು – ಎಚ್.ಸಿ.ಮಹದೇವಪ್ಪ, ಯತೀಂದ್ರ ಮಡಿಕೇರಿ, ಕೊಡುಗು – ಪೊನ್ನಣ್ಣ ಬಳ್ಳಾರಿ – ವಿ.ಎಸ್.ಉಗ್ರಪ್ಪ, ನಾಗೇಂದ್ರ ಹಾಸನ – ಶಿವಲಿಂಗೇಗೌಡ ಅವರಿಗೆ ಇಂದಿನಿಂದ ಜವಾಬ್ದಾರಿ

Exit mobile version