Revenue Facts

51.85 ಕೋಟಿ ದಂಡ ಸಂಗ್ರಹಕ್ಕೆ ಸಂಚಾರಿ ಪೊಲೀಸರಿಗೆ ನೆರವಾದ ರಿಯಾಯಿತಿ ಪ್ಲಾನ್:

51.85 ಕೋಟಿ ದಂಡ ಸಂಗ್ರಹಕ್ಕೆ ಸಂಚಾರಿ ಪೊಲೀಸರಿಗೆ ನೆರವಾದ ರಿಯಾಯಿತಿ ಪ್ಲಾನ್:

ಫೆ-09, ಬೆಂಗಳೂರು;ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡ ಸಂಗ್ರಹಣೆಯನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ 50% ರಿಯಾಯಿತಿ ನೀಡಿ ಫೆ 02 ರಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಯಲ್ಲಿ ಫೆ 03 ರಿಂದ ದಂಡ ಪಾವತಿ ಪ್ರಕ್ರಿಯೇ ಆರಂಭವಾಗಿದ್ದು ಕೇವಲ 06 ದಿನಗಳಲ್ಲಿ 51.85/- ಕೋಟಿ ದಂಡದ ಹಣ ಸಂಗ್ರಹವಾಗಿದ್ದು ಬರೋಬ್ಬರಿ 18.26 ಲಕ್ಷ ಪ್ರಕರಣಗಳು ಇತ್ಯರ್ಥವಾಗುವ ಮೂಲಕ ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆ ಯಶಸ್ವಿ ಕಂಡಂತಾಗಿದೆ.

ಫೆಬ್ರವರಿ 08 ರವರೆಗೆ ಪಿಡಿಎ ಮೂಲಕ 1.59 ಲಕ್ಷ ಪ್ರಕರಣಗಳಲ್ಲಿ 4.36 ಕೋಟಿ, ಪೇಟಿಎಂ ಮೂಲಕ 1.20 ಲಕ್ಷ ಪ್ರಕರಣಗಳಲ್ಲಿ 3.59 ಕೋಟಿ, ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ) ಮೂಲಕ 365 ಪ್ರಕರಣಗಳಲ್ಲಿ 85,450/- ರೂ, ಬೆಂಗಳೂರು ಒನ್ ಮೂಲಕ 42,710 ಪ್ರಕರಣಗಳಲ್ಲಿ 1.9/- ಕೋಟಿ ದಂಡ ಸಂಗ್ರಹವಾಗಿದೆ. ಬುಧವಾರ ಒಟ್ಟು 3,23,629/- ಪ್ರಕರಣಗಳಲ್ಲಿ 9/- ಕೋಟಿಯಷ್ಟು ದಂಡ ಪಾವತಿಯಾಗಿದೆ.

Exit mobile version