Revenue Facts

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ’ ಅವಧಿ ವಿಸ್ತರಣೆ,ಗುಡ್ ನ್ಯೂಸ್ ನೀಡಿದ ಸರ್ಕಾರ

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ’ ಅವಧಿ ವಿಸ್ತರಣೆ,ಗುಡ್ ನ್ಯೂಸ್ ನೀಡಿದ ಸರ್ಕಾರ

govt

ಬೆಂಗಳೂರು;Govt : ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿದ್ದು, ಸರ್ಕಾರ ಮತ್ತೊಂದು ವರ್ಷ ಬಿಗ್ ರಿಲೀಫ್ ನೀಡಿದೆ.ಡಿಸೆಂಬರ್ 31, 2022 ರವರೆಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಪಾಸಾಗಲು ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೊನೆ ಅವಕಾಶ ನೀಡಿತ್ತು. ಈ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಬೇಕೆಂದು ಸರ್ಕಾರಿ ನೌಕರರ ಸಂಘದಿಂದ ಮನವಿ ಮಾಡಲಾಗಿತ್ತು. ಈ ಅವಧಿಯನ್ನು 2023 ರ ಡಿಸೆಂಬರ್ 31ರವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಹಿ ಹಾಕಿದ್ದು, ಶೀಘ್ರವೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸ್ ಆಗುವುದನ್ನು ರಾಜ್ಯ ಸರ್ಕಾರ ಈಗ ಕಡ್ಡಾಯಗೊಳಿಸಿದೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಅನಿವಾರ್ಯವಾಗಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಲೇ ಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಿ ನೌಕರರಿಗೆ ಬಂದೊದಗಿದೆ. ಈ ಪರೀಕ್ಷೆ ಪಾಸು ಮಾಡದೇ ಇದ್ದಲ್ಲಿ ದಿನಾಂಕ 7.3.2018ರ ನಂತರ ವಾರ್ಷಿಕ ವೇತನ ಬಡ್ತಿಗೆ ಅರ್ಹರಿರುವುದಿಲ್ಲವೆಂದು ಐದು ವರ್ಷಗಳ ಹಿಂದೆಯೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಯಾರೆಲ್ಲ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಯಾರಿಗೆ ವಿನಾಯಿತಿ ಇದೆ ಮಾಹಿತಿಯನ್ನು ನೀಡುತ್ತದೆ ಈ ಲೇಖನ.

55 ಲಕ್ಷ ನೌಕರರು 2021ರ ಅಂತ್ಯದವರೆಗೆ ಪರೀಕ್ಷೆ ಬರೆದು ಅವರಲ್ಲಿ 1.65 ಲಕ್ಷ ನೌಕರರು ಪಾಸ್ ಆಗಿದ್ದಾರೆ.ಶಿಕ್ಷಣ ಇಲಾಖೆ, ನಿಗಮ ಮಂಡಳಿಗಳು ,ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ,ಹಲವಾರು ಇಲಾಖೆಗಳ ನೌಕರರು ಹಲವು ಬಾರಿ ಪರೀಕ್ಷೆಗೆ ಹಾಜರಾದರೂ ಉತ್ತೀರ್ಣರಾಗಿಲ್ಲ.3 ಲಕ್ಷ ನೌಕರರು ಪರೀಕ್ಷೆ ತೆಗೆದುಕೊಳ್ಳಬೇಕಿದೆ.ಹೀಗಾಗಿ ಅವಧಿ ವಿಸ್ತರಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಈ ಅಧಿಸೂಚನೆ ಹೊರಡಿಸಿದ ನಂತರ (ಅಂದರೆ 7.3.2012ರ ನಂತರ) ನೇಮಕಾತಿ ಹೊಂದಿದ ಅಧಿಕಾರಿಗಳು, ನೌಕರರು ಶೇ. 60ರಷ್ಟು, ಅಂದರೆ 48 ಅಂಕಗಳನ್ನು ಹಾಗೂ 7.3.2012ಕ್ಕೂ ಮೊದಲೇ ಸೇವೆಯಲ್ಲಿರುವ ಅಧಿಕಾರಿಗಳು, ನೌಕರರು ಶೇ. 35ರಷ್ಟು, ಅಂದರೆ 28 ಅಂಕಗಳಿಗೆ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ.

ಪರೀಕ್ಷೆ ಯಾರಿಗೆ ಕಡ್ಡಾಯವಲ್ಲ?

ಅರಣ್ಯವೀಕ್ಷಕರು, ಬೆಲೀಫ್‌ಗಳು ಮತ್ತು ಪ್ರೊಸೆಸರ್‌ಗಳು ಸರ್ವರ್‌ಗಳು ಅರಣ್ಯವೀಕ್ಷಕರು, ,ವಾಹನಚಾಲಕರು, ಪ್ರಾಥಮಿಕ ಶಾಲಾಶಿಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು, ನರ್ಸ್‌ಗಳು, ಅಬಕಾರಿರಕ್ಷಕರು, ಆರೋಗ್ಯಕಾರ್ಯಕರ್ತರು, ಡಿ ಗುಂಪಿನ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

Exit mobile version