Revenue Facts

ಕಡ್ಡಾಯ ಕನ್ನಡ ಫೆಬ್ರುವರಿ.28 ಡೆಡ್​​ಲೈನ್​: ಸಿಎಂ ಸಿದ್ದರಾಮಯ್ಯ

ಬೆಂಗಳೂರು;ರಾಜ್ಯದ ಎಲ್ಲ ಕಡೆಗಳಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದ್ದು, ಫೆ.28ರ ವರೆಗೆ ಅಂಗಡಿಗಳಿಗೆ ಡೆಡ್‌ಲೈನ್ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಸಿದ ಬಳಿಕ ಮಾತನಾಡಿ, ಜಾಹೀರಾತುಗಳಲ್ಲೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅರ್ಧದಷ್ಟು ಕನ್ನಡದಲ್ಲೇ ಬೋರ್ಡ್ ಇರಬೇಕೆಂದು 2018ರಲ್ಲಿಯೇ ಕಾನೂನು ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಈಗ ಶೇ.60ರಷ್ಟು ಕನ್ನಡ ಬಳಸಲೇಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.ನಾಮಫಲಕ ವಿಚಾರವಾಗಿ ನಿನ್ನೆ ಬೆಂಗಳೂರಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಗೃಹ ಸಚಿವರು, ಪೊಲೀಸ್, ಕನ್ನಡ ಸಂಸ್ಕೃತಿ, ಪಾಲಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಿಎಂ, ಸುಗ್ರೀವಾಜ್ಞೆ ಹೊರಡಿಸಲು ಅಗತ್ಯ ಕ್ರಮೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಹಿಂದೆ ಮಾರ್ಚ್ 24 2018ರ ಆದೇಶದಲ್ಲಿ ನಾಮಫಲಕದಲ್ಲಿ ಶೇ.ಅರವತ್ತು ಭಾಗ ಕನ್ನಡದಲ್ಲಿ ಇರಬೇಕು ಎಂದಿದೆ. ಕಾಯ್ದೆಯಲ್ಲಿ 50:50 ಎಂದು ಮಾಡಿದ್ದಾರೆ. ಈ‌ ಹಿಂದಿನಂತೆ ಕನ್ನಡದಲ್ಲಿ ಶೇ. 60 ಇರಬೇಕು. ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ತಿಳಿಸಲಾಗಿದೆ ಎಂದು ಸಿಎಂ‌ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದರು.

Exit mobile version