Revenue Facts

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

#Complaint # Lokayukta #against #former #CM #H.D.Kumaraswamy

ಬೆಂಗಳೂರು,ಡಿ 04:ಮಾಜಿ ಸಿಎಂ H.D.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ C.S.ಸಿದ್ದರಾಜು ಲೋಕಾಯುಕ್ತಕ್ಕೆ(Lokayukta) ದೂರು ನೀಡಿದ್ದಾರೆ.ಚುನಾವಣಾ ಸಂದರ್ಭದಲ್ಲಿ ಆಸ್ತಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಗಳಲ್ಲಿ ಕೇತನಗಾನಹಳ್ಳಿಯಲ್ಲಿ 24 ಎಕರೆ ಜಮೀನು ಖರೀದಿ ಮಾಡಿರುವ ಬಗ್ಗೆ ಉಲ್ಲೇಖಿಸಿಲ್ಲ. ಅಲ್ಲದೆ, ಇತರೆ ಕಡೆಗಳಲ್ಲಿ ಆಸ್ತಿ ಹೊಂದಿದ್ದರೂ ಪೂರ್ಣ ಮಾಹಿತಿ ನೀಡದೇ ವಂಚಿಸಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು 2004ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೇತಗಾನಹಳ್ಳಿ ಗ್ರಾಮದಲ್ಲಿ 24 ಎಕರೆ ಜಮೀನು ಇದೆ ಎಂದು ಹೇಳಿಕೊಂಡಿದ್ದಾರೆ. ಅವರು ಈಗ್ಗೆ ಕೆಲವು ದಿನಗಳ ಹಿಂದೆ ಮಾಧ್ಯಮದಲ್ಲಿ ಮಾತನಾಡುತ್ತಾ, ವಿವಿಧ ಸರ್ವೆ ನಂ.ಗಳಲ್ಲಿ 1,2,3,4 ಎಕರೆ ಯಂತೆ ವಿವಿಧ ಮೊತ್ತಕ್ಕೆ ಜಮೀನು ಖರೀದಿ ಮಾಡಿದ್ದೇವೆ. ತನ್ನ ತಾಯಿಯ ಸಹೋದರಿ ಶ್ರೀಮತಿ ಸಾವಿತ್ರಮ್ಮರವರಿಂದ ಪಡೆದಿರುವುದಾಗಿಯೂ ಹೇಳಿಕೊಂಡಿದ್ದಾರೆ.2008 ಹಾಗೂ 2018ರ ಚುನಾವಣೆಯ ಅಫಿಡವಿಟ್ ನಲ್ಲಿ ಬೆಂಗಳೂರಿನ ಜೆಪಿ ನಗರದ ಮನೆ ಖರೀದಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅದೇ ಮನೆಯನ್ನು 1995ರಲ್ಲಿ ಖರೀದಿಸಿರುವ ಕುರಿತು ಮಾಹಿತಿ ನೀಡದ್ದಾರೆ. ಕುಪೇಂದ್ರ ರೆಡ್ಡಿ ಅವರಿಂದ 9 ಕೋಟಿ 50 ಲಕ್ಷ ರೂ. ಸಾಲ ಪಡೆರುವುದಾಗಿ ಹೇಳಿದ್ದಾರೆ. ಆದರೆ, 2022 ರಲ್ಲಿ ಕುಪೇಂದ್ರ ರೆಡ್ಡಿ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಚೆನ್ನಾಂಬಿಕ ಫಿಲ್ಮ್ ಸಂಸ್ಥೆಗೆ 4 ಕೋಟಿ ಕೊಟ್ಟಿರುವುದಾಗಿ ಹೇಳಿ, ದೂರು ದಾಖಲಿಸಿದ್ದಾರೆ.ಪೂರ್ಣ ಪ್ರಮಾಣದ ಮಾಹಿತಿಯನ್ನ ನೀಡದೇ ವಂಚಿಸಿದ್ದಾರೆ ಎಂದು ಸಿ.ಎಸ್ ಸಿದ್ಧರಾಜು ಅವರು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

Exit mobile version