Revenue Facts

Commercial LPG ಸಿಲಿಂಡರ್ ಬೆಲೆ 101.50 ರೂ. ಹೆಚ್ಚಳ

Commercial LPG ಸಿಲಿಂಡರ್ ಬೆಲೆ 101.50 ರೂ. ಹೆಚ್ಚಳ

#Commercial #LPG #Cylinder #Price #Increase#

ದೆಹಲಿ;ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳು ಮತ್ತೆ ತುಟ್ಟಿಯಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್ ಪಿಜಿ(LPG) ಸಿಲಿಂಡರ್‌ ಗಳ ಬೆಲೆಯನ್ನು 101.50 ರೂ. ಗಳಷ್ಟು ಹೆಚ್ಚಿಸಿವೆ. ಇವು ತಕ್ಷಣದಿಂದಲೇ ಜಾರಿಗೆ ಬರುತ್ತವೆ.ನವೆಂಬರ್ ತಿಂಗಳ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಬೆಲೆ ಹೆಚ್ಚಿಸಿ, ಗ್ರಾಹಕರಿಗೆ ಶಾಕ್ ಕೊಟ್ಟಿವೆ.19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 100-103 ರೂ.ನಷ್ಟು ಏರಿಕೆಯಾಗಿದೆ. ಇಂದಿನಿಂದ ದೆಹಲಿಯಲ್ಲಿ 1833 ರೂಪಾಯಿಗೆ 19ಕೆಜಿ ಎಲ್​ಪಿಜಿ ಸಿಲಿಂಡರ್ ಲಭ್ಯವಾಗಲಿದೆ, ಕೋಲ್ಕತ್ತಾದಲ್ಲಿ 1943 ರೂ, ಮುಂಬೈನಲ್ಲಿ 1785 ರೂ. ಹಾಗೂ ಚೆನ್ನೈನಲ್ಲಿ 1999.50 ರೂ, ಬೆಂಗಳೂರಿನಲ್ಲಿ 1,813 ರೂ.ಆಗಿದೆ.ಈ ಹೆಚ್ಚಳವು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಕಳೆದ ಅಕ್ಟೋಬರ್ 1ರಂದು ಸಹ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಆಗ ಸಿಲಿಂಡರ್ ದರ 209 ರೂ. ಗಳಷ್ಟು ಏರಿಕೆಯಾಗಿತ್ತು. ಒಂದೇ ತಿಂಗಳಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ಸುಮಾರು 310 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ದೇಶಾದ್ಯಂತ 14.2 ಕೆಜಿ ಸಿಲಿಂಡರ್ ದರ ಸ್ಥಿರವಾಗಿದೆ. ಗಮನಾರ್ಹವಾಗಿ ಗೃಹಬಳಕೆ ಸಿಲಿಂಡರ್ ದರವನ್ನು ಕೊನೆಯದಾಗಿ ಆಗಸ್ಟ್ 30 ರಂದು ಕಡಿಮೆ ಮಾಡಲಾಗಿತ್ತು

ದೇಶದ ಪ್ರಮುಖ ನಗರಗಳಲ್ಲಿ ಗೃಹಬಳಕೆ ಎಲ್‌ಪಿ‌ಜಿ ದರ ಎಷ್ಟಿದೆ

*ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 903 ರೂ.

* ಕೋಲ್ಕತ್ತಾದಲ್ಲಿ 14 ಕೆಜಿ ಸಿಲಿಂಡರ್ ಬೆಲೆ 929 ರೂ.

* ಮುಂಬೈನಲ್ಲಿ ಎಲ್‌ಪಿಜಿ ಬೆಲೆ 902.5 ರೂ.

*ಚೆನ್ನೈನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 918.5 ರೂ.

 

Exit mobile version