Revenue Facts

commercial Cylinder;LPG ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆ

commercial Cylinder;LPG ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆ

ನವದೆಹಲಿ;ತೈಲ ಕಂಪನಿಗಳು(Oil Marketing Companies) ಇಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ(Commercial LPG Cylinders) ಬೆಲೆ ಇಳಿಸಿವೆ. ಈ ನಿರ್ಧಾರದಿಂದಾಗಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ 57.50 ರೂ. ಅಗ್ಗವಾಗಿದೆ. ಆದರೆ ದೇಶದ ನಾಲ್ಕು ಪ್ರಮುಖ 4 ಮೆಟ್ರೋ ನಗರಗಳಲ್ಲಿ ಮಾತ್ರ ವಾಣಿಜ್ಯಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. ದೆಹಲಿ, ಮುಂಬೈ, ಕೋಲ್ಕೊತಾ ಹಾಗೂ ಚೆನ್ನೈನಲ್ಲಿ 57.5 ರೂ. ಇಳಿಕೆಯಾಗಿದೆ. ದೀಪಾವಳಿಗೂ ಮೊದಲು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 101.5 ರೂ. ಏರಿಕೆಯಾಗಿತ್ತು. ಈಗ ದೀಪಾವಳಿ ಹಬ್ಬ ಮುಗಿದ ಮರುದಿನವೇ ಸಿಲಿಂಡರ್‌ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಳಿಕೆ ಮಾಡಿವೆ.ಬೆಂಗಳೂರು ಸೇರಿದಂತೆ ರಾಜ್ಯದ ಉಳಿದೆಡೆ ಹಳೆಯ ದರವೇ ಇರಲಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ ಬಳಿಕ ನವದೆಹಲಿಯಲ್ಲಿ 19 ಕೆ.ಜಿಯ ಒಂದು ಸಿಲಿಂಡರ್‌ಗೆ 1,775.5 ರೂ., ಕೋಲ್ಕೊತಾದಲ್ಲಿ 1,885.5 ರೂ., ಮುಂಬೈನಲ್ಲಿ 1,728 ರೂ. ಹಾಗೂ ಚೆನ್ನೈನಲ್ಲಿ 1,942 ರೂ. ಇದೆ. ಬದಲಾದ ದರಗಳು ಇಂದಿನಿಂದಲೇ(ನವೆಂಬರ್‌ 16ರಿಂದಲೇ) ನೂತನ ದರ ಜಾರಿಗೆ ಬಂದಿದೆ.

Exit mobile version