ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಎರಡನೇ ಟಿಪ್ಪು ಸುಲ್ತಾನ್ ಆಗುತ್ತಿದ್ದಾರೆ ಎಂದು ಬಿಜೆಪಿ(BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ವಿಜಯಪುರದಲ್ಲಿ(Vijaypura) ಮಾತನಾಡಿ, ಶಾಲೆಗಳಲ್ಲಿ ಸಮಾನತೆ ಇರಲಿ ಅಂತಾನೆ ಡಾ. ಅಂಬೇಡ್ಕರ್ ಅವರು ಸಮವಸ್ತ್ರ ಕಾಯ್ದೆ(Uniform Act) ತಂದಿದ್ದರು.ಬಿಜೆಪಿ ಸರ್ಕಾರ ಹಿಜಾಬ್ ನಿಷೇಧ ಮಾಡಿಲ್ಲ. ಶಾಲೆಯಲ್ಲಿ ಸಮಾನತೆ(Equality) ಇರಲಿ ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಧರಿಸದಂತೆ ಆದೇಶ ಹೊರಡಿಸಿತ್ತು. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಒಂದೆ ಸಮವಸ್ತ್ರದ ಕಾಯ್ದೆ ಮಾಡಿದ್ದರು. ಈ ರೀತಿ ಅವರಿಗೆ ತಿಳಿದಿದ್ದು ಧರಿಸಿಕೊಂಡು ಬಂದರೆ, ನಾಳೆ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಆಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ, ಲೋಕಸಭಾ ಚುನಾವಣೆಗೆ ಮುಸ್ಲಿಂರ ತುಷ್ಠಿಕರಣಕ್ಕೆ ಸಿಎಂ ನಿಂತಿದ್ದಾರೆಂದು ಆರೋಪಿಸಿದರು.ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.