Revenue Facts

ಪರ್ಮೀಶನ್ ಇಲ್ಲದ ಮೊಬೈಲ್ ಟವರ್ ಗಳಿಗೆ ಕೂಡಲೇ ದಂಡ ಹಾಕಲು ಸಿಎಂ ಆದೇಶ..!

ಕರ್ನಾಟಕ ರಾಜ್ಯಾದ್ಯಂತ ಅಕ್ರಮವಾಗಿ ಸ್ಥಾಪಿಸಿರುವ ಮೊಬೈಲ್ ಟವರ್ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಹಲವು ಟವರ್ ಗಳ ಸ್ಥಾಪನೆಗೆ ಯಾವುದೇ ಶುಲ್ಕವನ್ನು ಸರ್ಕಾರಕ್ಕೆ ಪಾವತಿ ಮಾಡಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬಹು ದೊಡ್ಡ ನಷ್ಟವಾಗಿದೆ ಎಂದು ರಮೇಶ್ ಬಾಬು ಅವರು ಮನವಿಯಲ್ಲಿ ತಿಳಿಸಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 1ಲಕ್ಷ ದಂಡ,ಮಹಾನಗರ ಪಾಲಿಕೆಯಲ್ಲಿ 50000 ದಂಡ..!

ರಾಜ್ಯದಲ್ಲಿ ಮೊಬೈಲ್ ಟವರ್ ಸ್ಥಾಪನೆಗೆ 2019ರ ನಿಯಮಾವಳಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷ ರೂ., ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50,000 ರೂ, ನಗರ ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 35,000 ರೂ. ಅಳವಡಿಕೆ ಶುಲ್ಕವನ್ನು ವಿಧಿಸಬಹುದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 8,000 ಟವರ್‌ಗಳಿದ್ದು ರಾಜ್ಯದಾದ್ಯಂತ 48,000ಕ್ಕೂ ಹೆಚ್ಚು ಟವರ್ ಗಳು ಇದ್ದಾವೆ.

ಅಕ್ರಮ ಮೊಬೈಲ್ ಟವರ್ ಕಂಪನಿಗಳಿಗೆ ಭಾರೀ ತಲೆ ದಂಡ..

ಹೌದು ರಾಜ್ಯಾದಲ್ಲಿ ಅಕ್ರಮವಾಗಿ ಟವರ್‌ ಹಾಕಿರುವ ಟೆಲಿಕಾಂ ಕಂಪೆನಿಗಳಿಗೆ ದಂಡ ವಿಧಿಸುವಂತೆ ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಅವರು ಸಲ್ಲಿಸಿರುವ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರ್ದೇಶನ ನೀಡಿದ್ದಾರೆ ಇದರಿಂದ ರಾಜ್ಯವು ಸುಮಾರು 7,000 ಕೋಟಿ ರೂಪಾಯಿ ಆದಾಯ ಗಳಿಸಬಹುದು ಎಂದು ಸಿಎಂ ಲೆಕ್ಕಾಚಾರ ಹಾಕಿದ್ದಾರೆನ್ನಲಾಗಿದೆ….

ಚೈತನ್ಯ, ರೆವೆನ್ಯೂ , ಫ್ಯಾಕ್ಟ್ ನ್ಯೂಸ್

Exit mobile version