Revenue Facts

ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್

ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್

ಬೆಂಗಳೂರು;ಮುಂದಿನ ತಿಂಗಳು ಮಂಡನೆಯಾಗಲಿರುವ ರಾಜ್ಯ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ.ಯೋಜನೆಗಳ ಬಗ್ಗೆ ಪ್ಲ್ಯಾನ್ ಮಾಡಿ, ಬ್ಲೂಪ್ರಿಂಟ್ ಕೊಡಿ ಎಂದು ಸೂಚ್ನೆ ನೀಡಿದ್ದಾರೆ.ಚುನಾವಣೆ ಹತ್ತಿರದ ಬಜೆಟ್ ಆಗಿರುವ ಕಾರಣ ಬಂಪರ್ ಗಿಫ್ಟ್‌ಗಳ ಸುರಿಮಳೆ ಸಾಧ್ಯತೆ ಇದೆ.ಮಹಿಳೆಯರು, ರೈತರು, ಶ್ರಮಿಕ ವರ್ಗ ಗಮನದಲ್ಲಿಟ್ಟುಕೊಂಡು‌ ಜನಪ್ರಿಯ ಯೋಜನೆಗಳು ಇರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ಸರಿಯಾಗಿ ನಿಲ್ಲುವಂತಹ ಪ್ಲ್ಯಾನ್ ಮಾಡಿ ಎಂದಿದ್ದಾರೆ ಎಂಬುದು‌ ಮೂಲಗಳ ಮಾಹಿತಿಯಾಗಿದೆ.

ಕಾಂಗ್ರೆಸ್ (Congress) ಪ್ರಣಾಳಿಕೆಯ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ತಂತ್ರ ನಡೆಸಿದ್ದು, ಕಾಂಗ್ರೆಸ್ ಭರವಸೆಗಳ ಸುರಿಮಳೆಗೆ ತಡೆ ಹಾಕಲು ಬಜೆಟ್ (Budget) ಘೋಷಣೆ ಅಸ್ತ್ರ ಪ್ರಯೋಗ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜನವರಿ ಕಡೆ ವಾರದಿಂದ ಬಜೆಟ್ ಸಿದ್ಧತಾ ಸಭೆಗಳನ್ನು ನಡೆಸಲು ಸಿಎಂ ಮುಂದಾಗಿದ್ದಾರೆ.

Exit mobile version