Revenue Facts

ಕರುನಾಡಿನ ಜನತೆಗೆ ಪಲ್ಲಕ್ಕಿ ಗಿಫ್ಟ್ ಕೊಟ್ಟ ಸಿಎಂ ಡಿಸಿಎಂ

ಬೆಂಗಳೂರು;KSRTC ಸಂಸ್ಥೆಯ ನೂತನ ಪಲ್ಲಕ್ಕಿ(Pallakki) ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಚಾಲನೆ ನೀಡಿದರು, ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಶೀರ್ಷಿಕೆಯೊಂದಿಗೆ(Tagline) ಸಾರಿಗೆ ನಿಗಮದ ಪಲ್ಲಕ್ಕಿ ರಸ್ತೆಗಿಳಿಯಲು ಸಜ್ಜಾಗಿದೆ.ಒಟ್ಟಾರೆ 148 ಬಸ್ ಗಳಿಗೆ ಚಾಲನೆ ನೀಡಿದ್ದು, 44 AC ಕ್ಲೀಪರ್ & 4 ನಾನ್ ಸ್ಲೀಪರ್ ಬಸ್‌ಗಳು ಒಳಗೊಂಡಿವೆ, ಈ ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ, ಉಳಿದ 100 ಬಸ್‌ಗಳಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ಈ ಬಸ್‌ಗಳು ಹೈಟೆಕ್ ಸೀಟ್‌ಗಳನ್ನು ಹೊಂದಿವೆಯಲ್ಲದೆ, ಇತರೆ ಸೌಲಭ್ಯಗಳ ವ್ಯವಸ್ಥೆಯನ್ನೂ ಸಾರಿಗೆ ಸಂಸ್ಥೆ ಮಾಡಿಕೊಟ್ಟಿದೆ.100 ನಗರ ಸಾರಿಗೆ ಬಸ್ಸುಗಳು ಹಾಗೂ 40 ನಾನ್ ಎಸಿ ಸ್ಲೀಪರ್ ಬಸ್ ಗಳು ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿದ್ದಾಗಿದೆ. ನಾಲ್ಕು ನಾನ್ ಎಸಿ ಸ್ಲೀಪರ್, ನಾಲ್ಕು ಎಸಿ ಸ್ಲೀಪರ್ ಬಸ್​ಗಳು ಟಾಟಾ ಕಂಪನಿಯದ್ದಾಗಿವೆ. ಈ ಪೈಕಿ 44 ಎಸಿ ಸ್ಲೀಪರ್, ನಾಲ್ಕು ನಾನ್ ಎಸಿ ಸ್ಲೀಪರ್ ಬಸ್​ಗಳನ್ನು ಹೊರತುಪಡಿಸಿ ಉಳಿದ 100 ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನೂತನ ನಾನ್ ಎಸಿ ಸೀಪರ್ ಬಸ್‌ಗಳಿಗೆ ‘ಪಲ್ಲಕ್ಕಿ’ ಎನ್ನುವ ಹೆಸರನ್ನು ಇಡಲಾಗಿದೆ. ಪ್ರೀಮಿಯಂ(Premium) ಸೇವೆ ಒದಗಿಸುವ ಬಸ್‌ಗಳಿಗೆ ಸಾಂಸ್ಕೃತಿಕ ಹೆಸರುಗಳನ್ನು ಇಡುವ ಪರಿಪಾಠ ಇದ್ದು, ರಾಜಹಂಸ, ಅಂಬಾರಿ, ನಂತರ ಪಲ್ಲಕ್ಕಿಯ ಹೆಸರು ಇಡಲಾಗಿದೆ.

Exit mobile version