Revenue Facts

Chandrayan 3: ಚಂದ್ರಯಾನ-3 ಗಗನನೌಕೆ ಜುಲೈ.14 ಕ್ಕೆ ಉಡಾವಣೆ

Chandrayan 3: ಚಂದ್ರಯಾನ-3 ಗಗನನೌಕೆ ಜುಲೈ.14 ಕ್ಕೆ ಉಡಾವಣೆ

ಬೆಂಗಳೂರು,ಜು.13- ಅದೊಂದು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದ ನೂರಾರು ಕೋಟಿ ಭಾರತೀಯರ ತುಂಬಾ ದಿನಗಳ ಕನಸು ಕೊನೆಗೂ ನನಸಾಗುವ ಸಮಯ ಬಂದೊದಗಿದೆ.ಇಂದು ಉಡವಾಣೆಯಾಗಬೇಕಿದ್ದ ಚಂದ್ರಯಾನ್-3 ನಾಳೆ ಮಧ್ಯಾಹ್ನ ಉಡವಾಣೆಯಾಗುತ್ತಿದೆ. ನಾಳೆ ಮದ್ಯಾಹ್ನ 2.35ಕ್ಕೆ ಸರಿಯಾಗಿ ಅಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧಾವನ್‌ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯು ನಭಕ್ಕೆ ಜಿಗಿಯಲಿದೆ.

ಯಶಸ್ವಿ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧ ಸಂಸ್ಥೆ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಚಂದ್ರನವರೆಗೆ ಉಪಗ್ರಹ ಗಳನ್ನು ತೆಗೆದುಕೊಂಡು ಕಕ್ಷೆಗೆ ಬಿಡುವ ಕಲೆ ಇಸ್ರೋಗೆ ಕರಗತ,ಇದೀಗ ಚಂದ್ರಯಾನ-1 ಚಂದ್ರನ ಮೇಲೆ ಇಳಿದರೆ ಭಾರತ ಜಾಗತಿಕ ಭೂಪಟದಲ್ಲಿ ಹೊಸ ದಾಖಲೆ ಸೃಷ್ಟಿಸಲಿದೆ. ಈವರೆಗೆ ಯಶಸ್ವಿಯಾಗಿ ಚಂದ್ರಯಾನ ಉಡಾವಣೆ ಮಾಡಿದ ರಾಷ್ಟ್ರಗಳಲ್ಲಿ ಅಮೆರಿಕ ,ಫ್ರಾನ್ಸ್ ಮತ್ತು ಚೀನಾ ಮಾಡಿದ ಸಾಧನೆಯ ಪಟ್ಟಿಗೆ ಭಾರತ ಸೇರ್ಪಡೆಯಾಗಲಿದೆ.ಈ ಉಡಾವಣೆಯನ್ನು ಇಸ್ರೋದ ಅಧಿಕೃತ ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಿಸಬಹುದು ಎಂದು ಇಸ್ರೋ ಹೇಳಿದೆ.ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿರುವ ಚಂದ್ರಯಾನ ನೌಕೆ ಹಲವು ವಿಶೇಷತೆ ಹೊಂದಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದುವಾಗಿರುವ ಚ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಈ ಯೋಜನೆಯ ಗುರಿಯಾಗಿದೆ.

Exit mobile version