ಬೆಂಗಳೂರು;ಬೇನಾಮಿ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದ ಕೇರಳದ ಐವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಆಧಾರ್, ಪಾನ್ ಕಾರ್ಡ್ ಪಡೆದು 1 ಸಹಿಗೆ 15-10,000 ಪಾವತಿಸಿ ಪ್ರತೀ ಖಾತೆಗೆ ಪ್ರತ್ಯೇಕ ಸಿಮ್ ಕಾರ್ಡ್ ಬಳಸುತ್ತಿದ್ದರು ಎನ್ನಲಾಗಿದ್ದು, 150ಕ್ಕೂ ಹೆಚ್ಚು ಖಾತೆ ವಶಕ್ಕೆ ಪಡೆದಿದ್ದಾರೆ. ಇವರಿಗೆ ದುಬೈನಲ್ಲೇ ಕುಳಿತು ಓರ್ವ ಮಾರ್ಗದರ್ಶನ ನೀಡುತ್ತಿದ್ದ ಎಂಬ ಮಾಹಿತಿಯನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಕೇರಳ ಮೂಲದ ಸಮೀರ್, ಮಹಮ್ಮದ್ ಹಸನ್, ಅಮೂಲ್ ಬಾಬು, ಮಹಮ್ಮದ್ ಇರ್ಫಾನ್, ತಂಝಿಲ್, ಮಂಜುನಾಥ್ ಬಂಧಿತರು. ಆರೋಪಿಗಳು, ಜನರ ಕೆವೈಸಿ ದಾಖಲೆಗಳನ್ನು ಪಡೆದು ನಕಲಿ ಬ್ಯಾಂಕ್ ಖಾತೆಗಳನ್ನು ಓಪನ್ ಮಾಡಿ ವಹಿವಾಟು (Transaction)ನಡೆಸುತ್ತಿದ್ದರು.ಆಧಾರ್, ಪಾನ್ ಕಾರ್ಡ್, ಒಂದು ಸಹಿಗೆ 10 ಸಾವಿರ ರೂಪಾಯಿ ರೇಟ್ ಫಿಕ್ಸ್ ಮಾಡುತ್ತಿದ್ದರು.ದುಬೈನಲ್ಲಿರುವ ಕಿಂಗ್ ಪಿನ್ ಬಂಧಿತ ಆರೊಪಿಗಳಿಗೆ ಅಲ್ಲಿಂದಲೇ ಸೂಚನೆ ನೀಡುತ್ತಿದ್ದ. ಆತನ ಸೂಚನೆಯಂತೆ ಆರೋಪಿಗಳು ವ್ಯವಹರಿಸುತ್ತಿದ್ದರು ಎಂದು ತಿಳಿದುಬಂದಿದೆ. ಮತ್ತಿಕೆರೆಯಲ್ಲಿ ಕಚೇರಿ ತೆರೆದಿದ್ದರು. ಮಂಜೇಶ್ ಎಂಬಾತ ತನ್ನ ಸ್ನೇಹಿತನ ಜೊತೆ ಈ ಕಚೇರಿಗೆ ಭೇಟಿ ನೀಡಿದಾಗ ದಾಖಲೆಗಳ ರಾಶಿ, ಬ್ಯಾಂಕ್ ಬುಕ್ ಗಳನ್ನು ಕಂಡು ಅನುಮಾನಗೊಂಡಿದ್ದ. ತಕ್ಷಣ ಸೈಬರ್ ಕ್ರೈಂ ಗೆ ಮಾಹಿತಿ ನೀಡಿದ್ದ. ಪರಿಶೀಲನೆ ನಡೆಸಿದ ಪೊಲೀಸರಿಗೆ ನಕಲಿ ಬ್ಯಾಂಕ್ ಖಾತೆ ಜಾಲದ ಬಗ್ಗೆ ಗೊತ್ತಾಗಿದೆ.