Revenue Facts

ಕಾವೇರಿ-2 ತಂತ್ರಾಂಶ ರಾಜ್ಯದ ಎಲ್ಲಾ ಉಪ ನೋಂದಣಿ ಕಛೇರಿಗಳಲ್ಲಿ ಅನುಷ್ಟಾನಗೊಳಿಸಲು ನಿಗದಿಯಾದ ದಿನಾಂಕಗಳ ಲಿಸ್ಟ್!

ಕಾವೇರಿ-2 ತಂತ್ರಾಂಶ ರಾಜ್ಯದ  ಎಲ್ಲಾ ಉಪ ನೋಂದಣಿ ಕಛೇರಿಗಳಲ್ಲಿ  ಅನುಷ್ಟಾನಗೊಳಿಸಲು  ನಿಗದಿಯಾದ ದಿನಾಂಕಗಳ ಲಿಸ್ಟ್!

ಕರ್ನಾಟಕ ಸರ್ಕಾರ ದ ನೂತನ ಅಧಿಸೂಚನೆ ಸಂಖ್ಯೆ: ಕಂಇ/18/ಎಂಎನ್ ಎಂಯು/2022 (ಭಾಗ-1) ರಂತೆ, ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯ Centre for Smart Governance, ಅಭಿವೃದ್ಧಿಪಡಿಸಿರುವ ಕಾವೇರಿ-2 ತಂತ್ರಾಂಶವನ್ನು ಈಗಾಗಲೇ ಉಪ ನೋಂದಣಿ ಕಛೇರಿ, ಚಿಂಚೋಳಿ ಮತ್ತು ಉಪನೋಂದಣಿ ಕಛೇರಿ, ಬೆಳಗಾವಿ ದಕ್ಷಿಣ ಕಛೇರಿಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿರುತ್ತದೆ.ತದನಂತರ, ದಿನಾಂಕ:24-02-2023ರ ಅಧಿಸೂಚನೆಯಲ್ಲಿ ಬಳ್ಳಾರಿ, ಉಡುಪಿ ಮತ್ತು ದೊಡ್ಡಬಳ್ಳಾಪುರ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ಅನುಮತಿ ನೀಡಲಾಗಿರುತ್ತದೆ.

ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ನೋಂದಣಿ ಸೇವೆ ಮುಂದಿನ ವರ್ಷದಿಂದ ಸಿಗಲಿದೆ. ಇದಕ್ಕಾಗಿ ಕಾವೇರಿ 2 ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಬೆಳಗಾವಿ ದಕ್ಷಿಣ ಹಾಗೂ ಗುಲಬರ್ಗಾ ಜಿಲ್ಲೆಯ ಚಿಂಚೋಳಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಂದಾಯ ಸೇವೆ ಆನ್ಲೈನ್ ನಲ್ಲಿಯೇ ಪಡೆಯಬಹುದಾಗಿದೆ.

ಕಾವೇರಿ 2 ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಸಾರ್ವಜನಿಕರು ತಮ್ಮ ಆಸ್ತಿ ರಿಜಿಸ್ಟ್ರೇಷನ್, ವಿವಾಹ ನೋಂದಣಿ, ಅಗ್ರಿಮೆಂಟ್ ನೋಂದಣಿ, ಜಿಪಿಎ ಕಾರ್ಯಗತ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಬಹುತೇಕ ನೋಂದಣಿ ಪ್ರಕ್ರಿಯೆ ಆನ್ಲೈನ್ ನಲ್ಲಿಯೇ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರು ಅನಾವಶ್ಯಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪಲಿದೆ. ಜತೆಗೆ ನಿಗದಿತ ಕಾಲ ಮಿತಿಯಲ್ಲಿ ಕೆಲಸ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಆಶಾಭಾವನೆ ಹೊಂದಲಾಗಿದೆ.

ಮುಂಬರುವ ದಿನಗಳಲ್ಲಿ ಕಾವೇರಿ-2 ತಂತ್ರಾಂಶವನ್ನು ಸಂಪೂರ್ಣ ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಗಳಲ್ಲಿ ಪ್ರಸ್ತಾಪಿಸಿದಂತೆ ಈ ಕೆಳಕಂಡಂತೆ ನಿಯಮಾನುಸಾರ ಅನುಷ್ಟಾನಗೊಳಿಸಲು ನೋಂದಣಿ ಮಹಾಪರಿವೀಕ್ಷಕರಿಗೆ ಮತ್ತು ಮುದ್ರಾಂಕಗಳ ಆಯುಕ್ತರಿಗೆ ಅನುಮತಿ ನೀಡಿ ಆದೇಶಿಸಿದೆ.

ಕ್ರ.
ಸಂ.
ಜಿಲ್ಲೆಯ ಹೆಸರು
ಅನುಷ್ಟಾನಗೊಳಿಸುವ ದಿನಾಂಕ
1
ಚಿಕ್ಕಬಳ್ಳಾಪುರ
01-04-2023 ರಿಂದ 18-04-2023
2
ರಾಮನಗರ
12-04-2023 ರಿಂದ 21-04-2023
3
ಕೋಲಾರ
17-04-2023 ರಿಂದ 02-05-2023
4
ದಾವಣಗೆರೆ
02-05-2023 ರಿಂದ 12-05-2023
5
ಬೆಂಗಳೂರು ಗ್ರಾಮಾಂತರ
06-05-2023 ರಿಂದ 19-05-2023
6
ಚಿತ್ರದುರ್ಗ
06-05-2023 ರಿಂದ 19-05-2023
7
ಶಿವಮೊಗ್ಗ
29-05-2023 ರಿಂದ 05-06-2023
8
ತುಮಕೂರು
23-05-2023 ರಿಂದ 30-05-2023
9
ಬಸವನಗುಡಿ
29-05-2023 ರಿಂದ 05-06-2023
10
ಗಾಂಧಿನಗರ
01-06-2023 ರಿಂದ 06-06-2023
11
ಜಯನಗರ
05-06-2023 ರಿಂದ 12-06-2023
12
ರಾಜಾಜಿನಗರ
09-06-2023 ರಿಂದ 16-06-2023
13
ಶಿವಾಜಿನಗರ
14-06-2023 ರಿಂದ 20-06-2023
14
ಮಂಡ್ಯ
01-04-2023 ರಿಂದ 20-04-2023
15
ಚಾಮರಾಜನಗರ
13-04-2023 ರಿಂದ 27-04-2023
16
ಕೊಡಗು
21-04-2023 ರಿಂದ 04-05-2023
17
ಚಿಕ್ಕಮಗಳೂರು
28-04-2023 ರಿಂದ 12-05-2023
18
ಮೈಸೂರು
08-05-2023 ರಿಂದ 31-05-2023
19
ಹಾಸನ
25-05-2023 ರಿಂದ 13-06-2023
20
ಉಡುಪಿ
07-06-2023 ರಿಂದ 21-06-2023
21
ದಕ್ಷಿಣ ಕನ್ನಡ
15-06-2023 ರಿಂದ 03-07-2023
22
ಕಲಬುರಗಿ
01-04-2023 ರಿಂದ 17-04-2023
23
ಯಾದಗಿರಿ
12-04-2023 ರಿಂದ 21-04-2023
24
ಬೀದರ್
18-04-2023 ರಿಂದ 29-04-2023
25
ಕೊಪ್ಪಳ
25-04-2023 ರಿಂದ 06-05-2023
26
ರಾಯಚೂರು
02-05-2023 ರಿಂದ 11-05-2023
27
ಬಳ್ಳಾರಿ
08-05-2023 ರಿಂದ 22-05-2023
28
ವಿಜಯನಗರ
16-05-2023 ರಿಂದ 26-05-2023
29
ಬೆಳಗಾವಿ
01-04-2023 ರಿಂದ 24-04-2023
30
ವಿಜಯಪುರ
18-04-2023 ರಿಂದ 29-04-2023
31
ಕಾರವಾರ
25-04-2023 ರಿಂದ 12-05-2023
32
ಧಾರವಾಡ
08-05-2023 ರಿಂದ 22-05-2023
33
ಗದಗ
17-05-2023 ರಿಂದ 01-06-2023
34
ಹಾವೇರಿ
25-05-2023 ರಿಂದ 08-06-2023
35
ಬಾಗಲಕೋಟೆ
03-06-2023 ರಿಂದ 21-06-2023

ಈ ಆದೇಶವು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ.ಸತ್ಯವತಿ ಸರ್ಕಾರದ ಉಪ ಕಾರ್ಯದರ್ಶಿ,ಕಂದಾಯ ಇಲಾಖೆ,ನೋಂದಣಿ ಮತ್ತು ಮುದ್ರಾಂಕ. ಇವರ ಮುಖ್ಯಸ್ಥಿಕೆಯಲ್ಲಿ ಈ ಮೇಲ್ಕಂಡಂತೆ ನರೆವೇರಲಿದೆ.

Exit mobile version