Revenue Facts

ದೇವರ ಫೋಟೋ ಅಥವಾ ವಿಗ್ರಹಗಳನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದಾ..?

ಬೆಂಗಳೂರು, ಜೂ. 01 : ಸುಮಾರು ಮನೆಗಳಲ್ಲಿ ದೇವರ ಮನೆಯಲ್ಲಿ ಹೆಚ್ಚಿನ ದೇವರ ಫೋಟೋಗಳು ಹಾಗೂ ವಿಗ್ರಹಗಳನ್ನು ತುಂಬಿಸಿ ಇಟ್ಟುಕೊಂಡಿರುತ್ತಾರೆ. ದೇವರ ಮನೆಯಲ್ಲಿ ಅಲ್ಲದೇ, ಮನೆಯ ಇತರೆ ಗೋಡೆಗಳ ಮೇಲೆ ಹಾಗೂ ಶೋಕೇಸ್‌ ಗಳಲ್ಲೂ ದೇವರ ಫೋಟೋ ಮತ್ತು ವಿಗ್ರಹಗಳು ಇರುತ್ತವೆ. ಕೆಲವರು ದೇವರ ವಿಗ್ರಹಳನ್ನು ಕೂಡ ಕೈ ಮುಷ್ಠಿಗಿಂತಲೂ ದೊಡ್ಡವುಗಳನ್ನು ಖರೀದಿಸಿ ತಂದು ಮನೆಯ ಶೋಕೇಸ್‌ ಗಳಲ್ಲಿ ಇಟ್ಟಿರುತ್ತಾರೆ. ಇನ್ನು ಕೆಲವರು ಬೆಡ್‌ ರೂಮ್‌ ನಲ್ಲಿ ದೇವರ ಫೋಟೋಗಳನ್ನು ಹಾಕಿಕೊಂಡಿರುತ್ತಾರೆ.

 

ಮನೆಯ ಹಾಲ್‌ ನಲ್ಲಿ ದೊಡ್ಡ ದೊಡ್ಡ ದೇವರ ಪೋಟೋಗಳನ್ನು ನೇತು ಹಾಕಿರುತ್ತಾರೆ. ಇದರಲ್ಲಿ ಬಹಳ ಮುಖ್ಯವಾಗಿ ಒಂದನ್ನು ಗಮನಿಸಬೇಕು. ದೇವರು ಎಂದಾಗ ಅದಕ್ಕೇ ಆದಂತಹ ಒಂದು ಪವಿತ್ರತೆ ಇರುತ್ತದೆ. ಅದನ್ನು ನಾವು ಕೆಡಿಸುವುದು ಸರಿಯಲ್ಲ. ದೇವರ ಮನೆ ಎಂದು ಬಂದಾಗ ಅಲ್ಲಿ ಎಷ್ಟು ಸಾಧ್ಯವೋಈ ಅಷ್ಟು ಫೋಟೋಗಳನ್ನು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬೇಕು. ಹೋಗಿದ ಕಡೆಗಳಿಂದೆಲ್ಲಾ ದೇವರ ಫೋಟೋಗಳನ್ನು ತರುವುದು ಮನೆಯಲ್ಲಿ ಎಲ್ಲೆಲ್ಲಿ ಜಾಗವಿರುತ್ತದೋ ಅಲ್ಲೆಲ್ಲಾ ಹಾಕಿಕೊಳ್ಳುವುದು. ಇಲ್ಲ ಶೆಲ್ಫ್‌ ಮೇಲೆ ಇಟ್ಟು ಪೂಜೆ ಮಾಡದೇ, ಧೂಳು ತುಂಬಿಸುವುದು ಎಲ್ಲಾ ಮನೆಯ ಶುಭತ್ವವನ್ನು ಹಾಳು ಮಾಡುತ್ತದೆ.

ಹಾಗಾಗಿ ಎಲ್ಲೆಂದರೆ ಅಲ್ಲಿ ದೇವರ ಫೊಟೋಗಳನ್ನು ಇಟ್ಟುಕೊಳ್ಳುವುದು ಶುಭವಲ್ಲ. ದೇವರ ಮನೆಯಲ್ಲಿ ಯಾವ ದಿಕ್ಕಿನಲ್ಲಿ ದೇವರ ಫೊಟೋವನ್ನು ಇಡಬೇಕೋ ಅಲ್ಲಿಗೆ ಮಾತ್ರವೇ ಇಡಬೇಕು. ಇನ್ನು ಕೆಲವರು ಮುಖ್ಯದ್ವಾರದಲ್ಲಿ ದೇವರ ಫೋಟೋವನ್ನು ಹಾಕುತ್ತಾರೆ. ಇದು ಒಳ್ಳೆಯದು. ಇಲ್ಲವೇ ಮುಖ್ಯದ್ವಾರದ ಎದುರುಗಡೆ ಗೋಡೆಯಲ್ಲಿ ದೇವರ ಫೋಟೋವನ್ನು ಹಾಕುವುದು ಮನೆಯ ಯಜಮಾನನಿಗೆ ಒಳ್ಳೆಯದು. ಆದರೆ ಕೆಲವರು ದೇವರ ಫೋಟೋವನ್ನು ನೋಡಲು ಬೆಡ್‌ ರೂಮ್‌ ನಲ್ಲೂ ಹಾಕಿರುತ್ತಾರೆ.

 

ಬೆಡ್‌ ರೂಮ್‌ ನಲ್ಲಿ ಬಾಗಿಲ ಮೇಲಿನ ಗೋಡೆಯಲ್ಲಿ ಸಣ್ಣದಾಗಿ ದೇವರ ಫೋಟೋವನ್ನು ಇಡಬಹುದು. ಆದರೆ, ಇಷ್ಟ ಬಂದಂತೆ ಎಲ್ಲೆಂದರಲ್ಲಿ ದೇವರ ಫೊಟೋಗಳನ್ನು ಮನೆಯಲ್ಲಿ ಹಾಕಬಾರದು. ಇದರಿಂದ ದೇವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಶುಭತ್ವವನ್ನು ಕಾಪಾಡಿಕೊಳ್ಳಲು ದೇವರ ಫೋಟೋಗಳು ಸರಿಯಾದ ದಿಕ್ಕಿನಲ್ಲಿದ್ದರೆ ಒಳ್ಳೆಯದು.

Exit mobile version