Revenue Facts

ವ್ಯವಸಾಯ ಮಾಡುವ ಜಾಗದಲ್ಲಿ ಮನೆ ಕಟ್ಟಬಹುದೇ..?

ಬೆಂಗಳೂರು, ಜು. 20 : ಕೃಷಿ ಭೂಮಿ ಎಂದರೆ, ಅಲ್ಲಿ ರೈತರು ವ್ಯವಸಾಯ ಮಾಡಿ, ಬೆಳೆ ತೆಗೆಯುತ್ತಾರೆ. ಪ್ರತಿ ವರ್ಷವೂ ಒಂದೊಂದು ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ಆದರೆ, ಈಗ ಜನಸಂಖ್ಯೆ ಹೆಚ್ಚಾಗುತ್ತಾ ಕೃಷಿ ಭುಮಿಯು ಮಾಯವಾಗುತ್ತಿದೆ. ಎಲ್ಲರೂ ತಮ್ಮ ತಮ್ಮ ಜಮೀನುಗಳನ್ನು ಲೇಔಟ್‌ ಗಳನ್ನಾಗಿ ನಿರ್ಮಾಣ ಮಾಡಿ ಬದಲಾಯಿಸುತ್ತಿದ್ದಾರೆ. ಅಲ್ಲಿ ಮನೆಗಳನ್ನು ಕಟ್ಟಿಕೊಂಡು ಕೃಷಿ ಭೂಮಿಯನ್ನ ವಾಸದ ಪ್ರದೇಶವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಅದರ ಬಗ್ಗೆ ಕಂಪ್ಲೀಟ್‌ ಡೀಟೇಲ್ಸ್‌ ಈ ಲೇಖನದಲ್ಲಿ ನೀಡಲಾಗಿದೆ.

ಆದರೆ, ಕೃಷಿ ಭೂಮಿಯನ್ನು ವಾಸದ ಸ್ಥಳವಾಗಿ ಮಾರ್ಪಾಡು ಮಾಡಿಕೊಳ್ಳಲು ಅದರದ್ದೇ ಆದ ರೂಲ್ಸ್‌ ಗಳಿವೆ. ನಿಯಮ ಪಾಲಿಸದೇ ಮನೆಯನ್ನು ನಿರ್ಮಾಣ ಮಾಡಿದರೆ, ಸಮಸ್ಯೆ ಆಗುತ್ತದೆ. ಹಾಗಂತ ಕಟ್ಟಿದ ಮನೆಯನ್ನು ಉರುಳಿಸುವುದಿಲ್ಲ. ಆದರೂ ಕೆಲ ನಿಯಮಗಳ ಬಗ್ಗೆ ನೀವು ತಿಳಿದಿರಲೇ ಬೇಕು. ಅದೂ ಕೂಡ ಕೆರೆ ಇರುವಂತಹ ಜಾಗವಾದರೆ, ಅಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ನೀವು ನಿವೇಶನ ಅಥವಾ ಮನೆಯನ್ನು ಖರೀದಿಸುವ ಮುನ್ನ ಈ ನಿಯಮಗಳ ಬಗ್ಗೆ ತಿಳಿದಿರುವುದು ಒಳ್ಳೆಯದು. ಹೊಸ ಲೇಔಟ್‌ ನಲ್ಲಿ ನಿವೇಶನವನ್ನು ಖರೀದಿಸುವಾಗ ಕೆಲ ದಾಖಲೆಗಳನ್ನು ಪರಿಶೀಲಿಸಿ.

ಕೃಷಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಮೊದಲು ಅದನ್ನು ವಸತಿ ಭೂಮಿಯನ್ನಾಗಿ ಬದಲಾಯಿಸಬೇಕು. ಇದಕ್ಕಾಗಿ ಕೆಲ ಶುಲ್ಕಗಳನ್ನು ಕಟ್ಟಬೇಕಾಗುತ್ತದೆ. ಜೊತೆಗೆ ನಗರಸಭೆ ಇಲ್ಲವೇ ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ಪತ್ರವನ್ನು ಪಡೆಯಬೇಕು. ಜಮೀನಿನ ಮಾಲೀಕರು ಭೂ ಬಳಕೆ ಯೋಜನೆ, ಬೆಳೆ ದಾಖಲೆ, ಗುರುತಿನ ಚೀಟಿ, ಸರ್ವೆ ನಕ್ಷೆ, ಭೂ ಕಂದಾಯ ರಸೀದಿಯನ್ನೂ ನೀಡಬೇಕಾಗುತ್ತದೆ. ಇನ್ನು ಜಮೀನಿನ ಮೇಲೆ ಯಾವುದೇ ಮೊಕದ್ದಮೆಗಳು ಇರಬಾರದು. ಹಾಗಿದ್ದಲ್ಲಿ ಮಾತ್ರವೇ ಕೃಷಿ ಭೂಮಿಯನ್ನು ವಸತಿ ಭೂಂಇಯನ್ನಾಗಿ ಬದಲಾಯಿಸಬೇಕು.

Exit mobile version