Revenue Facts

ವಾಣಿಜ್ಯ ನಗರಿಯಲ್ಲಿ ಹೆಚ್ಚಾಗಿದೆ ಮನೆ ಖರೀದಿಸುವವರ ಸಂಖ್ಯೆ

ವಾಣಿಜ್ಯ ನಗರಿಯಲ್ಲಿ ಹೆಚ್ಚಾಗಿದೆ ಮನೆ ಖರೀದಿಸುವವರ ಸಂಖ್ಯೆ

ಬೆಂಗಳೂರು, ಜೂ. 24 : ಈಗ ಎಲ್ಲಿ ನೋಡಿದರೂ, ಮನೆ ಖರೀದಿ, ನಿರ್ಮಾಣ, ಆಸ್ತಿ ಖರೀದಿ ಮಾಡುವುದೇ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿ ಒಂದು ಭಾಗವನ್ನು ಸ್ವಂತ ಮನೆ ಅಥವ ಆ ಆಸ್ತಿ ಖರೀದಿಗಾಗಿ ಮೀಸಲಿಡುತ್ತಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮವೂ ಬೆಳೆಯುತ್ತಿದೆ. ಹೀಗಾಗಿ ಭಾರತದಲ್ಲಿ ದಿನ ದಿನಕ್ಕೂ ಭೂಮಿಯ ಮೇಲೆ ಹಣ ಹೂಡುವವರ ಸಂಖFE ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮನೆಗಳು ಮಾರಾಟವಾಗಿವೆ. ಭಾರತದಲ್ಲಿ ಬೆಂಗಳೂರು, ಮುಂಬೈ, ದೆಹಲಿ ಹಾಗೂ ಅಹಮದಾಬಾದ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುತ್ತಿದೆ.

ಇನ್ನು ವಾಣಿಜ್ಯ ನಗರಿ ಮನುಂಬೈನಲ್ಲಿ ಸದ್ಯ ಮನೆ ಖರೀದಿ ಮಾಡುವವರ ಸಂಖ್ಯೆ ಅಧಿಕವಾಗಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಮನೆಗಳು ಮಾರಾಟವಾಗಿವೆ. ₹2.5 ಕೋಟಿ ಬೆಲೆಯ ಸುಮಾರು 15,520 ಯೂನಿಟ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಹೆಚ್ಚಿನ ಜನರು ಮನೆಯ ಮೇಲೆ ಹೂಡಿಕೆ ಮಾಡುತ್ತಿದ್ದು, ಅನಾರಕ್‌ ವರದಿ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ, ₹ 40-80 ಲಕ್ಷದ ನಡುವಿನ ಬೆಲೆಯ ಮನೆಗಳು ಗರಿಷ್ಠ ಶೇ. 33 ರಷ್ಟು ಮಾರಾಟವು ಏರಿಕೆಯನ್ನು ಕಂಡಿದೆ.

ಇನ್ನು ₹ 80 ಲಕ್ಷ – ₹ 1.5 ಕೋಟಿ ಬೆಲೆಯ ಮನೆಗಳು ಶೇ. 23 ರಷ್ಟು ಮಾರಾಟ ಹೆಚ್ಚಳವಾಗಿದೆ. ಮುಂಬೈನಲ್ಲಿ ಮಾತ್ರವಲ್ಲದೇ ಭಾರತದ ಇತರೆ ನಗರಗಳಲ್ಲೂ ವಸತಿ ಮಾರಾಟದ ಸಂಖ್ಯೆ ಏರಿಕೆಯಾಗಿದೆ. ಪುಣೆ, ಎನ್‌ಸಿಆರ್, ಹೈದರಾಬಾದ್, ಚೆನ್ನೈ, ಬೆಂಗಳೂರು ಹಾಗೂ ಕೊಲ್ಕತ್ತಾಗಳಲ್ಲೂ ಮನೆಗಳ ಮಾರಾಟವಾಗುತ್ತಿದೆ. ಪ್ರತಿಯೊಬ್ಬರು ಸ್ವಂತ ಮನೆ ಬೇಕು. ಎಂಬ ಕಾರಣಕ್ಕೆ ಹಾಗೂ ಆಸ್ತಿಯನ್ನು ಹೆಚ್ಚಿಸಿಕೊಳ್ಳುವ ಕಾರಣಗಳಿಗೆ ಮನೆಗಳನ್ನು ಖರೀದಿ ಮಾಡುತ್ತಿದ್ದಾರೆ.

Exit mobile version