Revenue Facts

B.S. ಯಡಿಯೂರಪ್ಪಗೆ ಮತ್ತೆ ಸಂಕಷ್ಟ

ಬೆಂಗಳೂರು;ಬಿಡಿಎ(BDA) ಕಾಮಗಾರಿ ಗುತ್ತಿಗೆ ನೀಡಲು ಲಂಚ(Bribe) ಪಡೆದ ಆರೋಪದ ಮೊಕದ್ದಮೆ ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ತಂದೊಡ್ಡಿದೆ, ಎಫ್‌ಐಆರ್(FIR) ದಾಖಲಿಸಲು ಕೋರಿರುವ ಅನುಮೋದನೆ ನಿರಾಕರಣೆಯನ್ನು ಮರುಪರಿಶೀಲನೆ ನಡೆಸುವುದಾಗಿ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ ಗೆ (Highcourt) ತಿಳಿಸಿದೆ. ವಿಚಾರಣೆ ಆಲಿಸಿದ ಡಿ.ವೈ.ಚಂದ್ರಚೂಡ್ ಹಾಗೂ .ಜೆ.ಬಿ.ಪಾರ್ಧಿವಾಲಾ, ಮನೋಜ್ ಮಿಶ್ರಾ ಅವರ ಪೀಠ, ಮೂರು ವಾರಗಳ ನಂತರ ಈ ವಿಷಯವನ್ನು ಪರಿಗಣಿಸುವುದಾಗಿ ತಿಳಿಸಿದೆ.ಬೆಂಗಳೂರಿನ ಕೋನದಾಸನಪುರದಲ್ಲಿ(Konadasapura) ಬಿಡಿಎ ವಸತಿ ಯೋಜನೆ ನಿರ್ಮಿಸುತ್ತಿದೆ. ಕಾಮಗಾರಿ ಗುತ್ತಿಗೆ ನೀಡಲು ಚಂದ್ರಕಾಂತ್ ರಾಮಲಿಂಗಂ ಅವರಿಂದ ಯಡಿಯೂರಪ್ಪ ಬದಲು ಐಎಎಸ್ ಅಧಿಕಾರಿ ಡಾ.ಜಿ.ಸಿ. ಪ್ರಕಾಶ್ 12 ಕೋಟಿ ರೂ. ಪಡೆದಿದ್ದರು. ಆ ಹಣವನ್ನು ಬಿ.ವೈ.ವಿಜಯೇಂದ್ರ ಮೂಲಕ ಯಡಿಯೂರಪ್ಪ ಅವರಿಗೆ ಪಾವತಿಸಲು ಪ್ರಕಾಶ್ ಪಡೆದುಕೊಂಡಿದ್ದರು ಎಂದು ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಆರೋಪಿಸಿದ್ದರು. ಆದರೆ, ಬಿಎಸ್‌ವೈ ಈ ಆರೋಪ ರಾಜಕೀಯ ಷಡ್ಯಂತ್ರ ಎಂದಿದ್ದಾರೆ,ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಇದು ಕೇವಲ ಆಡಳಿತದ ಸೇಡಿನ ಪ್ರಕರಣವಾಗಿ ಕಾಣುತ್ತಿಲ್ಲ. ಬದಲಾಗಿ ಸೇಡಿನ ರೂಪಾಂತರವಾಗಿದೆ’ ಎಂದು ವಾದಿಸಿದರು. ಮೂರು ವಾರಗಳ ನಂತರ ಈ ವಿಷಯವನ್ನು ಪರಿಗಣಿಸುವುದಾಗಿ ಪೀಠ ಹೇಳಿತು. ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಅವರ ಮಗ ಶಶಿಧರ ಮರಡಿ, ವಿರೂಪಾಕ್ಷಪ್ಪ ಅವರ ಅಳಿಯ ಸಂಜಯ್ ಶ್ರೀ, ಗುತ್ತಿಗೆದಾರ ಚಂದ್ರಕಾಂತ್‌ ರಾಮಲಿಂಗಂ, ಐಎಎಸ್‌ ಅಧಿಕಾರಿ ಜಿ.ಸಿ. ಪ್ರಕಾಶ್‌ ಮತ್ತು 37 ಕ್ರೆಸೆಂಟ್‌ ಹೋಟೆಲ್‌ ಮಾಲೀಕ ಕೆ.ರವಿ ಇತರ ಆರೋಪಿಗಳು.. ಯಡಿಯೂರಪ್ಪ ವಿರುದ್ದದ ತನಿಖೆಗೆ ನ್ಯಾಯಪೀಠ ತಡೆ ನೀಡಿದೆ.

Exit mobile version