Revenue Facts

ಚೆನ್ನೈ, ಬೆಂಗಳೂರಿನಲ್ಲಿ ಆಸ್ತಿ ಖರೀದಿಗೆ ಬ್ರಿಗೇಡ್ ಗ್ರೂಪ್‌ನಿಂದ ಅಂತಿಮ ಒಪ್ಪಂದ

ಚೆನ್ನೈ, ಬೆಂಗಳೂರಿನಲ್ಲಿ ಆಸ್ತಿ ಖರೀದಿಗೆ ಬ್ರಿಗೇಡ್ ಗ್ರೂಪ್‌ನಿಂದ ಅಂತಿಮ ಒಪ್ಪಂದ

ನವದೆಹಲಿ: ಬ್ರಿಗೇಡ್ ಗ್ರೂಪ್ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಪ್ರೈಮ್ ಲ್ಯಾಂಡ್ ಪಾರ್ಸೆಲ್‌ಗಳ ಅಂತಿಮ ಒಪ್ಪಂದಗಳಿಗೆ ಸಹಿ ಹಾಕಿದ್ದು, ಮುಂದಿನ 4 ರಿಂದ 5 ವರ್ಷಗಳಲ್ಲಿ ಒಟ್ಟು 4,000 ಕೋಟಿ ರೂಪಾಯಿ ಆದಾಯದ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಯು ತಿಳಿಸಿದೆ.

ಟಿವಿಎಸ್ ಗ್ರೂಪ್ ಕಂಪನಿಯಿಂದ ಚೆನ್ನೈನಲ್ಲಿರುವ ಮೌಂಟ್ ರೋಡ್ ಆಸ್ತಿಯನ್ನು ಖರೀದಿಸುವ ಒಪ್ಪಂದದಲ್ಲಿ ಕಚೇರಿ, ರಿಟೈಲ್ ಮತ್ತು ವಸತಿ ಒಳಗೊಂಡಿರುವ ಮಿಶ್ರ ಬಳಕೆಯ ಅಭಿವೃದ್ಧಿಯ ಸಂಭಾವ್ಯದ ಒಂದು ಮಿಲಿಯನ್ ಚದರ ಅಡಿಗಳನ್ನು ಹೊಂದಿದೆ.

ಸರ್ಜಾಪುರ ರಸ್ತೆಯ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ಶಾಲೆಗಳಿಗೆ ಸಮೀಪದಲ್ಲಿರುವ ಬೆಂಗಳೂರು ಜಂಟಿ ಅಭಿವೃದ್ಧಿ ಆಸ್ತಿಯು 2 ದಶಲಕ್ಷ ಚದರ ಅಡಿಗಳಷ್ಟು ವಸತಿ ಅಪಾರ್ಟ್‌ಮೆಂಟ್‌ಗಳ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ.

ಕಂಪನಿಯ ಸಿಎಂಡಿ ಎಂ.ಆರ್. ಜೈಶಂಕರ್, “ನಾವು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗೆ ಒತ್ತು ನೀಡುವ ಮೂಲಕ ದಕ್ಷಿಣ ಭಾರತದತ್ತ ಗಮನಹರಿಸುತ್ತಿದ್ದೆವೆ. ಈ ಕಾರಣ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಈ ಎರಡೂ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಭಾಗವಾಗಿದೆ” ಎಂದು ಮಾಹಿತಿ ನೀಡಿದರು.

ಬ್ರಿಗೇಡ್ ಗ್ರೂಪ್ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಪ್ರಮುಖ ಯೋಜನೆಗಳೊಂದಿಗೆ 10 ಮಿಲಿಯನ್ ಚದರ ಅಡಿಯ ಮುಂಬರುವ ಹಲವು ಯೋಜನೆಗಳನ್ನು ಹೊಂದಿದೆ.

Exit mobile version