Revenue Facts

ಖಾತೆ ಬದಲಾವಣೆಗೆ ಲಂಚ: ದ್ವಿತೀಯದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

#Bribery#account change #Second-class assistant #lokayukta trap

ಬೆಂಗಳೂರು: ಸರ್ಕಾರಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಆತನ ಸ್ನೇಹಿತನನ್ನು ಲೋಕಾಯುಕ್ತ ಅಧಿಕಾರಿಗಳು (Lokayuktha) ದಾಳಿ ಮಾಡಿ ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರು ದಕ್ಷಿಣ(Banglore south) ಉಪ ವಿಭಾಗಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (Second Grade Assistant) ಹಾಗೂ ಮದ್ಯವರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.ಬಂಧಿತ ಆರೋಪಿಗಳನ್ನು ಕಂದಾಯ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಬಾಲಕೃಷ್ಣ ಮತ್ತು ಆತನ ಸ್ನೇಹಿತ ಕಂಪ್ಯೂಟರ್ ಆಪರೇಟರ್ ಸೋಮಶೇಖರ್ ಎಂದು ಗುರುತಿಸಲಾಗಿದೆ.ಮೋಹನ್ ಕುಮಾರಿ ಹೆಸರಿನ ಖಾತೆಯನ್ನ ತನ್ನ ಪುತ್ರಿ ನಿಸರ್ಗ ಹೆಸರಿಗೆ ಬದಲಾವಣೆ ಮಾಡಲು ಬ್ಯಾಟರಾಜು ಎಂಬುವವರು ಬೆಂಗಳೂರು ದಕ್ಷಿಣ ತಾಲ್ಲೂಕು ಉಪ ವಿಭಾಗಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಕೆಲಸ ಮಾಡಿಕೊಡಲು ಕಂದಾಯ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಬಾಲಕೃಷ್ಣ,ಆತನ ಸ್ನೇಹಿತ ಕಂಪ್ಯೂಟರ್ ಆಪರೇಟರ್ ಸೋಮಶೇಖರ್ ಒಂದು ಲಕ್ಷ ಇಪ್ಪತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ವ್ಯವಹಾರ ಪೂರ್ಣಗೊಳಿಸಲು ಬಾಲಕೃಷ್ಣ ₹1.20 ಲಕ್ಷ ಲಂಚಕ್ಕೆ (Bribe) ಬೇಡಿಕೆ ಇಟ್ಟು, ಬಳಿಕ 80 ಸಾವಿರ ರೂ.ಗೆ ಒಪ್ಪಿಕೊಂಡಿದ್ದರು. ಇನ್ನು ಈ ಬಗ್ಗೆ ಬ್ಯಾಟರಾಜ ಅವರು ಲೋಕಾಯಕ್ತ ಬೆಂಗಳೂರು ನಗರ ಪೊಲೀಸ್‌ ಘಟಕಕ್ಕೆ ದೂರು (Complaint) ಸಲ್ಲಿಸಿದ್ದರು.ಬಾಲಕೃಷ್ಣ ಅವರ ಸೂಚನೆಯಂತೆ ದೂರುದಾರರು ಲಂಚದ ಹಣದೊಂದಿಗೆ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಕಚೇರಿಗೆ ಹೋಗಿದ್ದರು. ಈ ವೇಳೆ ಸೋಮಶೇಖರ್‌ ಕೈಗೆ ಹಣ ಕೊಡಿ ಎಂದು ಮೊದಲನೇ ಆರೋಪಿ ಬಾಲಕೃಷ್ಣ ತಿಳಿಸಿದರು.ಕಚೇರಿಯ ಬಳಿ ಮಧ್ಯವರ್ತಿ ಲಂಚದ ಹಣ ಪಡೆಯುವಾಗ ತಕ್ಷಣ ದಾಳಿ (Raid) ಮಾಡಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.ಲೋಕಾಯುಕ್ತದ ಬೆಂಗಳೂರು ನಗರ SP–1 ಶ್ರೀನಾಥ್‌ ಜೋಶಿ ನೇತೃತ್ವದಲ್ಲಿ ಈ ತನಿಖಾ ಕಾರ್ಯಾಚರಣೆ ನಡೆದಿದೆ.

Exit mobile version