Revenue Facts

ಬ್ರ್ಯಾಂಡ್‌ ಬೆಂಗಳೂರು ಅನಿಸಿಕೆ- ಸಲಹೆ ಸಲ್ಲಿಕೆ ಅವಧಿ ಜುಲೈ 15 ವರೆಗೆ ವಿಸ್ತರಣೆ

ಸಾರ್ವಜನಿಕರ ಅಭಿಪ್ರಾಯ ಪಡೆಯುವ ಉದ್ದೇಶದಿಂದ ‘ಬ್ರ್ಯಾಂಡ್‌ ಬೆಂಗಳೂರು’ ಪೋರ್ಟಲ್‌ ಆರಂಭ.ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ ಅನಿಸಿಕೆ ಸಲಹೆಗಳನ್ನು ನೀಡುವ ಅವಧಿಯನ್ನು ಜೂನ್ 30ರಿಂದ ಜುಲೈ 15 ದವರೆಗೆ ವಿಸ್ತರಿಸಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಹಾಗೂ ಬ್ಯಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಈಗಾಗಲೇ ಸರ್ವ ಪಕ್ಷ ಶಾಸಕರ ಜೊತೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಲಹೆಗಳನ್ನು ಪಡೆದಿದ್ದರು.ನಾಗರಿಕರಿಂದ ನಿರೀಕ್ಷೆಗೂ ಮೀರಿ ಅನಿಸಿಕೆ ಹಾಗೂ ಸಲಹೆಗಳು ಬರುತ್ತಿರುವ ಸಿದ್ದೆಲೆಯಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಾಗರಿಕರು ನೀಡುವ ಅಭಿಪ್ರಾಯ, ಸಲಹೆಗಳ ಸಮೀಕ್ಷೆಯ ಅವಧಿಯನ್ನು ಜೂ. 30 ರಿಂದ ಜುಲೈ 15ರವರೆಗೆ ವಿಸ್ತರಿಸಲಾಗಿದೆ.

ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ನಾಗರಿಕರಿಂದ ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳ ಬಗ್ಗೆ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಸಲುವಾಗಿ ಜೂನ್ 21ರಂದು ಪ್ರತ್ಯೇಕ ವೆಬ್ ಫೋರ್ಟಲ್ www.brandbengaluru.karnataka.gov.in ಬಿಡುಗಡೆಗೊಳಿಸಿದ್ದರು.

Exit mobile version