Revenue Facts

Bomb Threat Email;RBI ಸೇರಿ 3 ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ

Bomb Threat Email;RBI ಸೇರಿ 3 ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ

ಮುಂಬೈ;RBI ಸೇರಿ 3 ಬ್ಯಾಂಕ್‌ಗಳಿಗೆ ಬಾಂಬ್‌ ಬೆದರಿಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಸೇರಿ ಮೂರು ಬ್ಯಾಂಕ್‌ಗಳಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಮುಂಬೈನ RBI ಕಚೇರಿ, ಖಾಸಗಿ ಬ್ಯಾಂಕ್‌ಗಳಾದ HDFC & ICICI ಬ್ಯಾಂಕ್‌ಗೆ ಮಂಗಳವಾರ ಬೆದರಿಕೆ ಪತ್ರ ಮೇಲ್ ಮಾಡಲಾಗಿದೆ ಎಂದು ವರದಿಯಾಗಿದೆ. ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರದ ವಿರುದ್ಧ ನಾವು 11 ಸ್ಥಳಗಳಲ್ಲಿ ಬಾಂಬ್‌ ಇಡುತ್ತೇವೆ ಎಂದು ಮೇಲ್(Mail) ಮಾಡಲಾಗಿದೆ,ಆರ್ಬಿಐ(RBI) ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ಇಮೇಲ್ನಲ್ಲಿ ಒತ್ತಾಯಿಸಲಾಗಿದೆ.ಮುಂಬೈನ 11 ಸ್ಥಳಗಳಲ್ಲಿ ಬಾಂಬ್ ಬೆದರಿಕೆ ಬಂದಿದ್ದು, ಮಧ್ಯಾಹ್ನ 1:30 ಕ್ಕೆ ಬಾಂಬ್ ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮುಂಬೈನ ಇತರ ಎರಡು ಬ್ಯಾಂಕುಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಬೆದರಿಕೆ ಇಮೇಲ್ ಸ್ವೀಕರಿಸಿದ ಇತರ ಎರಡು ಬ್ಯಾಂಕುಗಳು – ಎಚ್ಡಿಎಫ್ಸಿ ಮತ್ತು ಐಸಿಐಸಿಐ ಬ್ಯಾಂಕುಗಳು.ಬೆದರಿಕೆ ಇಮೇಲ್ ಕಳುಹಿಸಿದ ಐಡಿ – khilafat.india@gmail.com ಆಗಿದೆ

Exit mobile version