ಬಿಎಂಟಿಸಿಯು ಕೇಂದ್ರ ಸರ್ಕಾರದ ‘ಫೇಮ್-2’ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಖರೀದಿಸುತ್ತಿರುವ ಹವಾನಿಯಂತ್ರಣ ರಹಿತ 921 ವಿದ್ಯುತ್ ಚಾಲಿತ ಬಸ್‌ಗಳ ಪೈಕಿ, ಮೊದಲ ಹಂತದಲ್ಲಿ 100 ಬಸ್‌ಗಳು ಸಂಸ್ಥೆಯ ತೆಕ್ಕೆಗೆ ಸೇರುತ್ತಿವೆ..
ಡಿ.26ರಂದು ಚಾಲನೆ
ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 100 ಎಲೆಕ್ಟ್ರಿಕ್ ಬಸ್‌ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಉಳಿದ 821 ಬಸ್‌ಗಳು 2024ರ ವರ್ಷಾಂತ್ಯಕ್ಕೆ ಸಂಸ್ಥೆಯನ್ನು ಕೂಡಲಿವೆ..
ಈಗಾಗಲೇ 390 EV ಬಸ್ ಗಳನ್ನು ಸಿದ್ದಗೊಳಿಸಿರುವ ಸಂಸ್ಥೆ..
ಈ ಎಲ್ಲಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ12 ವರ್ಷಗಳ ಅವಧಿಗೆ ಪಡೆಯಲಾಗುತ್ತಿದೆ. ಸಂಸ್ಥೆಯು ಈಗಾಗಲೇ 390 ಇವಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಟಾಟಾ ಕಂಪೆನಿಯ 100 ಬಸ್ ಸೇರ್ಪಡೆ ನಂತರ ಆ ಸಂಖ್ಯೆ 490ಕ್ಕೆ ಏರಿಕೆಯಾಗಲಿದೆ.ಹೀಗಾಗಿ ಪ್ರಯಾಣಿಕರು ಬಸ್ ರಶ್ ಅಂತ ಒದ್ದಾಡುವ ಸನ್ನಿವೇಶ ಸೃಷ್ಟಿಯಾಗದಂತೆ BMTC ಪ್ರಯತ್ನಿಸುತ್ತಿದೆ..
ಅಭಿಜಿತ್ .ರೆವಿನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು