Revenue Facts

BMRCL;ಮೆಟ್ರೋ ‘ಪಿಂಕ್ ಲೈನ್’ ಮಾರ್ಗದಲ್ಲಿ 45,000 ಚ.ಅಡಿ ಭೂ ಸ್ವಾಧೀನ ಪ್ರಕ್ರಿಯೆ

BMRCL;ಮೆಟ್ರೋ ‘ಪಿಂಕ್ ಲೈನ್’ ಮಾರ್ಗದಲ್ಲಿ 45,000 ಚ.ಅಡಿ ಭೂ ಸ್ವಾಧೀನ ಪ್ರಕ್ರಿಯೆ

ಬೆಂಗಳೂರು; ಬಿಎಂಆರ್‌ಸಿಎಲ್ ಸಂಸ್ಥೆ ನಮ್ಮ ಮೆಟ್ರೊ ಹಂತ 2ರ ಪಿಂಕ್ ಲೈನ್​​​ ಮಾರ್ಗದಲ್ಲಿ ನಾಗವಾರದಲ್ಲಿ ರಿಸೀವಿಂಗ್ ಸಬ್ ಸ್ಟೇಷನ್ ನಿರ್ಮಿಸುತ್ತಿದ್ದು, ಇದಕ್ಕಾಗಿ 45 ಸಾವಿರ ಚದರ ಅಡಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.ಈ ಕುರಿತು ಪ್ರಾಥಮಿಕ ಅಧಿಸೂಚನೆಯನ್ನು ಇತ್ತೀಚೆಗೆ ಸರ್ಕಾರಿ ಗೆಜೆಟ್‌ನಲ್ಲಿ ಹೊರಡಿಸಲಾಗಿದೆ. ನಂತರ ನಮ್ಮ ಮೆಟ್ರೋ ಪರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ರಿಸೀವ್ ಸ್ಟೇಷನ್ ನಿರ್ಮಾಣಕ್ಕೆ ಬಹುದೊಡ್ಡ ಜಾಗದ ಅಗತ್ಯವಿತ್ತು. ನಾಗವಾರದಿಂದ ಕಾಕಳೇನ ಅಗ್ರಹಾರ ಮೆಟ್ರೋ ಲೈನ್‌ಗೆ ಇದು ಅನುಕೂಲವಾಗಿದೆ. ಹುಳಿಮಾವು, ಬನ್ನೇರುಘಟ್ಟ ರಸ್ತೆಯಲ್ಲಿ ಮತ್ತೊಂದು ಉಪಕೇಂದ್ರ ಸ್ಥಾಪನೆಯಾಗಲಿದೆ ಎಂದಿದ್ದಾರೆ.ಕಳೆದ ನವೆಂಬರ್ 30ರ ಹೊತ್ತಿಗೆ ಈ ಪಿಂಕ್ ಮಾರ್ಗದಲ್ಲಿನ ವಿವಿಧ ವಿಭಾಗಗಳ ಸಿವಿಲ್ ಕಾಮಗಾರಿಗಳು ಶೇ. 35.85 ರಿಂದ 75.82 ರಷ್ಟು ಪೂರ್ಣಗೊಂಡಿವೆ. ಕೊತ್ತನೂರು ಡಿಪೋ ಶೇ.29.1ರಷ್ಟು ಪೂರ್ಣಗೊಂಡಿದೆ.

ಇಲ್ಲಿನ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಯುತ್ತಿದ್ದಂತೆ ಬಿಬಿಎಂಪಿ ಆಸ್ತಿ ಇಲಾಖೆಯು ಅದನ್ನು ಮರುಪಡೆಯಲು ಅಗತ್ಯ ವ್ಯವಸ್ಥೆ ಮಾಡಿದೆ ಎಂದು ದಕ್ಷಿಣ ವಲಯದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆಗಳು) ಮಹಾಂತೇಶ್ ಎಸ್ ಟಿಒಐಗೆ ತಿಳಿಸಿದರು.

ಬೆಂಗಳೂರಿನಲ್ಲಿ 55 ಕಿ.ಮೀ. ಮೆಟ್ರೊ ಲೈನ್‌ ಹೊಂದಿರುವ ಬಿಎಂಆರ್‌ಸಿಎಲ್‌ ಇದೀಗ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣಕ್ಕೆ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಿದೆ. ಈ ಮೂಲಕ ವಾಣಿಜ್ಯ ಆದಾಯ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ. ಹೊಸ ನಾಲ್ಕು ಮಹಡಿಗಳಲ್ಲಿ ಆಫೀಸ್‌ ಸ್ಥಳಾವಕಾಶ, ಮಾಲ್‌ಗಳು, ಥಿಯೇಟರ್‌ಗಳು, ವಾಣಿಜ್ಯ ಮಳಿಗೆಗಳು ಇರಲಿವೆ. ಈ ಮೂಲಕ ಆದಾಯ ಬಾಚಿಕೊಳ್ಳಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ಈ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಮುಂದಿನ ಜನವರಿ 17 ರಂದು ನಡೆಯಲಿದೆ. 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.

Exit mobile version