Revenue Facts

39 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಆದೇಶ ಹೊರಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

39 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಆದೇಶ ಹೊರಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ಬೆಂಗಳೂರು;ರಾಜ್ಯ ಬಿಜೆಪಿ ಅಧ್ಯಕ್ಷ B.Y.ವಿಜಯೇಂದ್ರ ಈ ಸಂಬಂಧ ಭಾನುವಾರ ಆದೇಶಿಸಿ ಪ್ರಕಟಣೆ ಹೊರಡಿಸಿದ್ದಾರೆ. ಜತೆಗೆ ಪ್ರಕೋಷ್ಠಗಳ ಸಂಯೋಜಕರು, ಕಾರ್ಯಾಲಯ ಉಸ್ತುವಾರಿಗಳನ್ನೂ ನೇಮಿಸಿದ್ದಾರೆ.ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ 9 ಜಿಲ್ಲೆಗಳಲ್ಲಿ ಹಾಲಿ ಅಧ್ಯಕ್ಷರುಗಳನ್ನೇ ಮುಂದುವರಿಸಲಾಗಿದೆ.39 ಜಿಲ್ಲಾಧ್ಯಕ್ಷರ ಪೈಕಿ ಒಂದು ಜಿಲ್ಲೆಗೆ ಒಬ್ಬರು ಮಹಿಳೆಯರನ್ನು ನೇಮಿಸಲಾಗಿದೆ. ಬಿಜೆಪಿ(BJP) ರಾಜ್ಯಾಧ್ಯಕ್ಷರಾಗಿ ಹೊಸ ಜವಾಬ್ದಾರಿ ಹೊತ್ತಿರುವ ಬಿ.ವೈ. ವಿಜಯೇಂದ್ರ ಪಕ್ಷದ ಗೆಲುವಿಗಾಗಿ ಸಾಕಷ್ಟು ಬದಲಾವಣೆಗಳು ತರುತ್ತಿದ್ದು, ಸಂಘಟನೆಯ ದೃಷ್ಟಿಯಿಂದ ಇಂದು ಜಿಲ್ಲಾಧ್ಯಕ್ಷರುಗಳನ್ನು ನೇಮಿಸಿದ್ದಾರೆ.

ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

ಧಾರವಾಡ ಗ್ರಾಮಾಂತರ ನಿಂಗಪ್ಪ ಸುತ್ತಗಟ್ಟಿ

ಬೆಳಗಾವಿ ನಗರ: ಗೀತಾ ಸುತಾರ್

ಬೆಳಗಾವಿ ಗ್ರಾಮಾಂತರ: ಸುಭಾಷ್ ಪಾಟೀಲ್

ಚಿಕ್ಕೋಡಿ: ಸತೀಶ್ ಅಪ್ಪಾಜಿಗೋಳ್

ಬಾಗಲಕೋಟೆ: ಶಾಂತಗೌಡ ಪಾಟೀಲ್

ವಿಜಯಪುರ: ಆ‌ರ್.ಎಸ್.ಪಾಟೀಲ್

ಬೀದ‌ರ್: ಸೋಮನಾಥ ಪಾಟೀಲ್

ಮೈಸೂರು ನಗರ ಎಲ್.ನಾಗೇಂದ್ರ

ಮೈಸೂರು ಗ್ರಾಮಾಂತರ ಎಲ್.ಆರ್.ಮಹಾದೇವಸ್ವಾಮಿ

ಚಾಮರಾಜನಗರ ಸಿ.ಎಸ್.ನಿರಂಜನ್ ಕುಮಾರ್

ಮಂಡ್ಯ ಇಂದ್ರೇಶ್ ಕುಮಾರ್

ಹಾವೇರಿ ಅರುಣ್ ಕುಮಾರ್ ಪೂಜಾರ

ದಾವಣಗೆರೆ: ರಾಜಶೇಖರ್

ತುಮಕೂರು: ಎಚ್‌.ಎಸ್.ರವಿಶಂಕರ(ಹೆಬ್ಬಾಕ)

ಹುಬ್ಬಳ್ಳಿ-ಧಾರವಾಡ ತಿಪ್ಪಣ್ಣ ಮಜ್ಜಗಿ

ಉತ್ತರ ಕನ್ನಡ ಎನ್.ಎಸ್.ಹೆಗಡೆ

ಶಿವಮೊಗ್ಗ ಟಿ.ಡಿ.ಮೇಘರಾಜ್

ಚಿಕ್ಕಮಗಳೂರು ದೇವರಾಜ ಶೆಟ್ಟಿ

ಉಡುಪಿ ಕಿಶೋರ್ ಕುಂದಾಪುರ

ರಾಮನಗರ: ಆನಂದಸ್ವಾಮಿ

ಮಧುಗಿರಿ: ಬಿ.ಸಿ.ಹನುಮಂತೇಗೌಡ

ಚಿತ್ರದುರ್ಗ: ಎ.ಮುರಳಿ

ಕೊಡಗು ರವಿ ಕಾಳಪ್ಪ

ಹಾಸನ ಸಿದ್ದೇಶ್ ನಾಗೇಂದ್ರ

ಕಲಬುರಗಿ ಗ್ರಾಮಾಂತರ : ಶಿವರಾಜ ಪಾಟೀಲ್ ರವಾರಿ

ಕಲಬುರಗಿ ನಗರ: ಚಂದ್ರಕಾಂತ ಪಾಟೀಲ್

ಗದಗ: ರಾಜು ಕುರಡಗಿ

ದಕ್ಷಿಣ ಕನ್ನಡ ಸತೀಶ್ ಕುಂಪಲ

Exit mobile version