Revenue Facts

ಮೂರು ರಾಜ್ಯಗಳ ಸಿಎಂ ಆಯ್ಕೆಗೆ ವೀಕ್ಷಕರ ಘೋಷಣೆ ಮಾಡಿದ ಬಿಜೆಪಿ

ಮೂರು ರಾಜ್ಯಗಳ ಸಿಎಂ ಆಯ್ಕೆಗೆ ವೀಕ್ಷಕರ ಘೋಷಣೆ ಮಾಡಿದ ಬಿಜೆಪಿ

#BJP has #announced #observers # selection # CMs # three states

ನವದೆಹಲಿ;ಇತ್ತೀಚಿಗೆ ನಡೆದ ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿ ಅಧಿಕಾರಕ್ಕೇರುತ್ತಿದ್ದು ಈ ಮಧ್ಯೆ ಮೂರು ರಾಜ್ಯಗಳಿಗೆ ಸಿಎಂ ಆಯ್ಕೆ ಮಾಡಲು ವೀಕ್ಷಕರನ್ನ ನೇಮಿಸಿದೆ,ಪಕ್ಷವು ಮಧ್ಯಪ್ರದೇಶಕ್ಕೆ ಮನೋಹರಲಾಲ್ ಖಟ್ಟರ್, ಆಶಾ ಲಖೇಡಾ ಮತ್ತು ಕೆ ಲಕ್ಷ್ಮಣ್ ಅವರನ್ನು ವೀಕ್ಷಕರನ್ನಾಗಿ ಮಾಡಿದ್ದರೆ, ರಾಜನಾಥ್, ವಿನೋದ್ ತಾವೆ ಮತ್ತು ಸರೋಜ್ ಪಾಂಡೆ ಅವರನ್ನು ರಾಜಸ್ಥಾನಕ್ಕೆ ವೀಕ್ಷಕರನ್ನಾಗಿ ಮಾಡಲಾಗಿದೆ. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ವೀಕ್ಷಕರ ಹೆಸರನ್ನು ಪ್ರಕಟಿಸಿದ್ದಾರೆ. ಚತ್ತೀಸ್‌ಗಢಕ್ಕೆ ಇನ್ನೂ ವೀಕ್ಷಕರ ನೇಮಕವಾಗಿಲ್ಲ.ಚುನಾವಣಾ ಫಲಿತಾಂಶ ಬಂದು ಐದು ದಿನ ಕಳೆದಿದ್ದು ಇನ್ನೂ ಮೂರು ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಮೂರು ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳ ಆಯ್ಕೆಯಾಗಿ ಇದೀಗ ವೀಕ್ಷಕರನ್ನು ನೇಮಿಸಲಾಗಿದೆ.ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಗುರುವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದರು. ಪ್ರಧಾನಿ ಜತೆಗಿನ ಸಭೆ ಬಳಿಕ ಯೋಗಿ ಆದಿತ್ಯನಾಥ್ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು.

Exit mobile version