Revenue Facts

ಜನನ, ಮರಣ ನೋಂದಣಿ ‘ವಿಳಂಬ ಶುಲ್ಕ ಹೆಚ್ಚಳ, ಸರ್ಕಾರದಿಂದ ಮತ್ತೊಂದು ಶಾಕ್

ಜನನ, ಮರಣ ನೋಂದಣಿ ‘ವಿಳಂಬ ಶುಲ್ಕ  ಹೆಚ್ಚಳ, ಸರ್ಕಾರದಿಂದ ಮತ್ತೊಂದು ಶಾಕ್

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಜನನ, ಮರಣ ಪ್ರಮಾಣ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು ಭಾರೀ ಹೆಚ್ಚಳ ಮಾಡಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಜನನ, ಮರಣ ನೋಂದಣಿ(ತಿದ್ದುಪಡಿ) ನಿಯಮಗಳು, 2023ಕ್ಕೆ ಅನುಮೋದನೆ ನೀಡಲಾಗಿದೆ. ಜನನ, ಮರಣ ಸಂಭವಿಸಿದ 21 ದಿನಗಳ ನಂತರ ಹಾಗೂ 30 ದಿನಗಳೊಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕ(Late registration fee) ರೂ.2ರಿಂದ ರೂ.100ಕ್ಕೆ ಹೆಚ್ಚಳ ಮಾಡಲಾಗಿದೆ. ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ಜನನ, ಮರಣ ನೋಂದಣಿ(ತಿದ್ದುಪಡಿ) ನಿಯಮಗಳು, 2023ಕ್ಕೆ ಅನುಮೋದನೆ ನೀಡಲಾಗಿದೆ.ಇದರಿಂದಾಗಿ ಜನನ, ಮರಣ ನೋಂದಣಿ ( Registration of Births and Deaths ) ನಿಯಮಗಳು 1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಅನುಮೋದಿಸಿದೆ.

Exit mobile version