Revenue Facts

ಬೆಂಗಳೂರಿನ ಕೆಲ ನಗರಗಳ ಆಸ್ತಿ ಬೆಲೆ ಅತಿ ಶೀಘ್ರದಲ್ಲೇ ಏರಿಕೆಯಾಗಲಿದೆ

ಬೆಂಗಳೂರು, ಆ. 12 : ಇತ್ತೀಚೆಗಷ್ಟೇ ವೈಟ್ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ 13.71 ಕಿಮೀ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಯನ್ನು ಮಾಡಿದರು. ಈ ಸ್ಟ್ರೆಚ್ ನಲ್ಲಿ ಒಟ್ಟು 12 ನಿಲ್ದಾಣಗಳು ಬರುತ್ತವೆ. ಐಟಿ ಕೆಲಸಕ್ಕೆ ಹೋಗುವವರು ಈಗ ಮೆಟ್ರೋದಲ್ಲಿ ಟ್ರಾಫಿಕ್ ಇಲ್ಲದೇ, ಹಾಯಾಗಿ ಪ್ರಯಾಣ ಮಾಡಬಹುದಾಗಿದೆ. ಇಷ್ಟು ದಿನ, ಐಟಿ ಪಾರ್ಕ್ಗಳು, ಫಾರ್ಚೂನ್ ಕಂಪನಿಗಳು ಸೇರಿದಂತೆ ಇತರ ಪ್ರಮುಖ ಪ್ರದೇಶಗಳಿಗೆ ಹೋಗಲು ಇಲ್ಲಿ ಕಡಿಮೆ ಎಂದರೂ ಒಂದು ಗಂಟೆ ಸಮಯ ಹಿಡಿಯುತ್ತಿತ್ತು.

ಈಗ ಮೆಟ್ರೋದಲ್ಲಿ ಕೇವಲ 22 ರಿಂದ 24 ನಿಮಿಷಗಳಲ್ಲಿ ಪ್ರಯಾಣ ಮಾಡಬಹುದು. ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ಯಪಾಳ್ಯ, ಹೂಡಿ, ಸೀತಾರಾಮ ಪಾಳ್ಯ, ಕುಂದನಹಳ್ಳಿ, ನಲ್ಲೂರು ಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಚನ್ನಸಂದ್ರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳು ಮೆಟ್ರೋದಲ್ಲಿದ್ದು, ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ.

ಈ ಮಾರ್ಗದಲ್ಲಿ ಈಗ ಮೆಟ್ರೋ ಬಂದಿದ್ದರಿಂದ ಇಲ್ಲಿನ ರಿಯಲ್ ಎಸ್ಟೇಟ್ ಬೆಲೆಯೂ ಏರಿಕೆಯಾಗಲಿದೆ. ಈಗಷ್ಟೇ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗಿದ್ದು, ಮೊದಲ ಮೂರು ತಿಂಗಳೂ ಶೇ. 10 ರಷ್ಟು ಭೂಮಿಯ ಬೆಲೆ ಏರಿಕೆಯನ್ನು ಕಾಣಲಿದೆ. ಬಳಿಕ ಗಣನೀಯವಾಗಿ ಸೈಟ್, ಮನೆಗಳ ಬೆಲೆ ಏರಿಕೆಯಾಗುತ್ತವೆ. ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಮೊಟ್ರೋ ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಪರಿವರ್ತಿಸಲಿದೆ. ಮೆಟ್ರೋ ರೈಲು ಸಂಪರ್ಕದಿಂದ ನಗರಗಳು ಮೂಲ ಸೌಕರ್ಯಗಳಿಂದ ಕೂಡಿರುತ್ತವೆ. ಇದರಿಂದ ಜನರು ಆಕರ್ಷಿತರಾಗುತ್ತಾರೆ. ಭೂಮಿಯ ಬೆಲೆ ಏರಿಕೆಗೆ ಕಾರಣವಾಗುತ್ತದೆ.

Exit mobile version