Revenue Facts

ಬೆಂಗಳೂರು – ಮೈಸೂರು ಟೋಲ್ ದರ ವಸೂಲಿ ಕೆಎಸ್​ಆರ್​ಟಿಸಿ ಪ್ರಯಾಣ ದರ ಏರಿಕೆ

ಬೆಂಗಳೂರು – ಮೈಸೂರು  ಟೋಲ್ ದರ ವಸೂಲಿ ಕೆಎಸ್​ಆರ್​ಟಿಸಿ ಪ್ರಯಾಣ ದರ ಏರಿಕೆ

ಬೆಂಗಳೂರು;ಟೋಲ್ ಹೊರೆಯನ್ನು ಬೆಂಗಳೂರು, ಮೈಸೂರು ಎಕ್ಸ್​​ಪ್ರೆಸ್​ವೇನಲ್ಲಿ ಸಂಚರಿಸುವ ಕೆಎಸ್​​ಆರ್​ಟಿಸಿ​ ಪ್ರಯಾಣಿಕರಿಗೆ ವರ್ಗಾಯಿಸಲು ನಿರ್ಧರಿಸಿದೆ.ಬೆಂಗಳೂರು ಮೈಸೂರು ಪ್ರಯಾಣದ ದರ ಹೆಚ್ಚಳ ಮಾಡಿ ಕೆಎಸ್​ಆರ್​ಟಿಸಿ ಮಂಗಳವಾರ ಪ್ರಕಟಣೆ ಹೊರಡಿಸಿದೆ. ತೀವ್ರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಇಂದು ಬೆಳಗ್ಗೆಯಿಂದ ಮೊದಲ ಹಂತದ ಟೋಲ್ ಸಂಗ್ರಹ ಆರಂಭಿಸಿದ್ದು, ಕೆಎಸ್ ಆರ್ ಟಿಸಿ ಈ ಟೋಲ್ ಶುಲ್ಕದ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ಹೊರಿಸಿದೆ. ಸಾಮಾನ್ಯ ಬಸ್​​ನ ದರ 150 ರೂಪಾಯಿ ಇತ್ತು. 15 ರೂಪಾಯಿ ಹೆಚ್ಚಳದಿಂದ 165 ರೂಪಾಯಿ ದರ ತೆರಬೇಕಿದೆ.ರಾಜಹಂಸದಲ್ಲಿ ಈ ಮೊದಲು 180 ಇತ್ತು.. ಈಗ 18 ರೂಪಾಯಿ ಹೆಚ್ಚಳದಿಂದ 198 ರೂಪಾಯಿ ನೀಡಬೇಕಿದೆ.. ಇನ್ನು, ಮಲ್ಟಿ ಆ್ಯಕ್ಸೆಲ್​​ನ ದರ 330 ರೂಪಾಯಿ ಇದ್ದು, 20 ರೂಪಾಯಿ ಏರಿಕೆ ಆಗಿದೆ. ಹೀಗಾಗಿ 340 ರೂಪಾಯಿ ಟಿಕೆಟ್​​ ನಿಗದಿ ಆಗಿದೆ

ಉಭಯ ನಗರಗಳ ನಡುವಿನ ಎಲೆಕ್ಟ್ರಿಕ್ ಬಸ್ ಮತ್ತು ವೋಲ್ವೋ ಬಸ್‌ಗಳ ಟಿಕೆಟ್‌ಗಳಿಗೂ ಈ ದರ ಹೆಚ್ಚಳ ಅನ್ವಯವಾಗಲಿದೆ. ಟೋಲ್ ಶುಲ್ಕವನ್ನು ಭರಿಸುವುದಕ್ಕಾಗಿ ಮಾತ್ರ ಈ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಸ್ ಆರ್ ಟಿಸಿ ಹೇಳಿದೆ.ಅಂತರರಾಜ್ಯ ಬಸ್​ ಸೇವೆಗಳನ್ನೂ ಹೊಂದಿದ್ದು, ಇತರ ಕಡೆಗಳಲ್ಲಿ ಟೋಲ್‌ಗಳನ್ನು ಪಾವತಿಸುವುದು ನಮಗೆ ಹೆಚ್ಚು ಸಮಸ್ಯೆಯಾಗಿಲ್ಲ. ಆದರೆ ಮೈಸೂರು ಬೆಂಗಳೂರು ಎಕ್ಸ್​​ಪ್ರೆಸ್ ವೇಯಲ್ಲಿ ಟೋಲ್ ದರ ಸ್ವಲ್ಪ ಹೆಚ್ಚಿರುವುದರಿಂದ ಟಿಕೆಟ್ ದರದಲ್ಲಿ ಅನಿವಾರ್ಯವಾಗಿ ಹೆಚ್ಚಳ ಮಾಡಬೇಕಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ತಿಳಿಸಿದ್ದಾರೆ.ಬಸ್​ಗಳ ಏಕಮುಖ ಸಂಚಾರಕ್ಕೆ 460 ರೂ, ಎರಡು ಕಡೆ ಸಂಚಾರಕ್ಕೆ 690 ರೂ, ಬಸ್​​ಗಳ ತಿಂಗಳ ಟೋಲ್ ಪಾಸ್​ ದರ 15,325 ರೂ. ನಿಗದಿಯಾಗಿದೆ. ಇದೀಗ ಈ ಹೊರೆಯನ್ನು ಕೆಎಸ್​ಆರ್​ಟಿಸಿ ಪ್ರಯಾಣಿಕರಿಗೆ ವರ್ಗಾಯಿಸಿಲು ಮುಂದಾಗಿದೆ.

Exit mobile version