Revenue Facts

ಬೆಂಗಳೂರಿನಲ್ಲಿ ಶೇ. 40 ರಷ್ಟು ಅಧಿಕವಾದ ಬಾಡಿಗೆ ಬೆಲೆ!!

ಬೆಂಗಳೂರಿನಲ್ಲಿ ಶೇ. 40 ರಷ್ಟು ಅಧಿಕವಾದ ಬಾಡಿಗೆ ಬೆಲೆ!!

ಬೆಂಗಳೂರು, ಜೂ. 02 : ಸಿಲಿಕಾನ್‌ ಸಿಟಿ ಬಹಳ ವೇಗವಾಗಿ ಬೆಳೆಯುತ್ತಿರುವ ನಗರ. ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಪ್ರತಿಯೊಂದರ ಬೆಲೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಬಾಡಿಗೆ ಮನೆಗಳ ಬೆಲೆ ಕೈಗೆಟುಕದ ರೀತಿಯಲ್ಲಿ ಬೆಳೆಯುತ್ತಿದೆ. ಸಾಮಾನ್ಯವಾಗಿ ಬಾಡಿಗೆ ಮನೆಯಲ್ಲಿ ಬಾಡಿಗೆಯನ್ನು ಪ್ರತಿ ವರ್ಷ ಶೇ.5 ರಿಂದ 10 ರಷ್ಟು ಬಾಡಿಗೆ ಹಣವನ್ನು ಹೆಚ್ಚಿಸಲಾಗುತ್ತದೆ. ಹೀಗಿರುವಾಗ ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವೂ ಹೆಚ್ಚಾಗುತ್ತಿದ್ದು, ಬೇಡಿಕೆಯೂ ಅಧಿಕವಾಗಿದೆ.

 


ಬೆಮಗಳೂರಿನಲ್ಲಿ ಮನೆ ಬಾಡಿಗೆ ದರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 25ರಷ್ಟು ಅಧಿಕವಾಗಿದೆ. ಅದರಲ್ಲೂ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಬೆಲೆ ದ್ವಿಗುಣಗೊಂಡಿದೆ. ಕೋರಮಂಗಲ, ಸರ್ಜಾಪುರ, ವೈಟ್‌ ಫೀಲ್ಡ್, ಮಾರತಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಮನೆ ಬಾಡಿಗೆ ದರ ಹೆಚ್ಚಾಗಿದೆ. ಈ ನಗರಗಳಲ್ಲಿ ಶೇ. 30 ರಿಂದ 40ರಷ್ಟು ಬಾಡಿಗೆ ಮನೆ ಮೇಲಿನ ದರಗಳು ಹೆಚ್ಚಾಗಿವೆ. 2 ಬಿಎಚ್‌ಕೆ ಮನೆಗಳಿಗೆ 25000 ರೂಪಾಯಿಗಳಿಂದ 32,400 ರೂ.ನಷ್ಟು ಬಾಡಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಉಳಿದ ನಗರಗಳಲ್ಲಿ 2ಬಿಎಚ್‌ ಕೆ ಮನೆಗಳಿಗೆ 15000 ದಿಂದ 22000 ರೂಪಾಯಿಯವರೆಗೂ ಇದೆ. ಇದರಿಂದ ಬೆಂಗಳೂರಿನಲ್ಲಿ ಜೀವನ ಮಾಡುವುದೇ ಕಷ್ಟ ಎಂದು ಹಲವರು ಹೇಳುತ್ತಿದ್ದಾರೆ. ಬೆಂಗಳೂರಿನ ಸ್ಲಂ ಏರಿಯಾಗಳು ಕೂಡ ಕಾಸ್ಟ್ಲಿ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಬೆಂಗಳೂರಿನ ಬಾಡಿಗೆಗಳು ಮೊದಲಿಗಿಂತಲೂ ಎರಡರಷ್ಟು ಹೆಚ್ಚಾಗಿದೆ. ಅದರಲ್ಲೂ ರಿಂಗ್ ರೋಡ್ ಹೊರವಲಯ, ಮಾನ್ಯತಾ ಟೆಕ್ ಪಾರ್ಕ್, ರಾಜಾಜಿನಗರ ಹಾಗೂ ವೈಟ್ ಫೀಲ್ಡ್ ನಲ್ಲಿ ಬಾಡಿಗೆ ಮನೆಯ ಬೆಲೆ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ 350ಕ್ಕೂ ಅಧಿಕ ಕಂಪನಿಗಳು ಇದ್ದು, ಸುಮಾರು ಒಂದೂವರೆ ಮಿಲಿಯನ್ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಬಾಡಿಗೆ ಮನೆಗಳು ಬೇಕು ಎಂದು ಈಗ ಎಲ್ಲರೂ ಬಾಡಿಗೆ ಮನೆಗಳನ್ನು ಹುಡುಕು ಹುಡುಕಿ ಸಾಕಾಗಿದ್ದಾರೆ. ಐಟಿ ಹಬ್ ಹಾಗೂ ಟೆಕ್ ಪಾರ್ಕ್ ಗಳ ಸುತ್ತ ಮುತ್ತ 2-3 ಕಿಲೋ ಮೀಟರ್ ದೂರದವರೆಗೂ ಮನೆ ಬಾಡಿಗೆಯ ಬೆಲೆಗಳು ಗಗನಕ್ಕೇರಿವೆ.

Exit mobile version